Home ಟಾಪ್ ಸುದ್ದಿಗಳು ಪಾಕ್ ಪರ ಬೇಹುಗಾರಿಕೆ: ಭಾರತದ ಪೌರತ್ವ ಪಡೆದಿದ್ದ ಲಾಭಶಂಕರ ಮಹೇಶ್ವರಿ ಬಂಧನ

ಪಾಕ್ ಪರ ಬೇಹುಗಾರಿಕೆ: ಭಾರತದ ಪೌರತ್ವ ಪಡೆದಿದ್ದ ಲಾಭಶಂಕರ ಮಹೇಶ್ವರಿ ಬಂಧನ

ಗುಜರಾತ್: ಎಟಿಎಸ್ ತಾರಾಪುರದಲ್ಲಿ ಪಾಕಿಸ್ತಾನದ ಬೇಹುಗಾರನನ್ನು ಪೊಲೀಸರು ಬಂಧಿಸಿದ್ದಾರೆ. ಲಾಭಶಂಕರ್ ಮಹೇಶ್ವರಿ ಬಂಧಿತ ವ್ಯಕ್ತಿ. ಲಾಭಶಂಕರ್ ಮಹೇಶ್ವರಿ ಮೂಲತಃ ಪಾಕಿಸ್ತಾನಿ. 1999ರಲ್ಲಿ ತನ್ನ ಹೆಂಡತಿಯೊಂದಿಗೆ ಚಿಕಿತ್ಸೆಗಾಗಿ ಭಾರತಕ್ಕೆ ಬಂದಿದ್ದನು. ಆರಂಭದಲ್ಲಿ ಆತ ತಾರಾಪುರದಲ್ಲಿರುವ ಅತ್ತೆಯ ಮನೆಯಲ್ಲಿ ತಂಗಿದ್ದನು. ಅಲ್ಲಿ ಕೆಲವು ಅಂಗಡಿಗಳನ್ನು ತೆರೆದು ವ್ಯಾಪಾರ ಮಾಡುತ್ತಿದ್ದನು. 2006ರಲ್ಲಿ ಭಾರತದ ಪೌರತ್ವ ಪಡೆದನು. ಇದರ ನಂತರ 2022ರ ಆರಂಭದಲ್ಲಿ ತನ್ನ ಪೋಷಕರನ್ನು ಭೇಟಿ ಮಾಡಲು ಪಾಕಿಸ್ತಾನಕ್ಕೆ ತೆರಳಿದನು. ಅಂದಿನಿಂದ ಲಾಭಶಂಖರ ಪಾಕಿಸ್ತಾನದ ಗುಪ್ತಚರ ಸಂಸ್ಥೆಯೊಂದಿಗೆ ಸಂಪರ್ಕದಲ್ಲಿರೋದು ಪತ್ತೆಯಾಗಿದೆ.

ಆಗಸ್ಟ್ 15ರ ಮೊದಲು ಭಾರತದ ಭದ್ರತಾ ಪಡೆಗಳ ಸಿಬ್ಬಂದಿಯ ಆಂಡ್ರಾಯ್ಡ್ ಮೊಬೈಲ್ ಹ್ಯಾಂಡ್ಸೆಟ್ಗಳಿಗೆ ‘ಹರ್ ಘರ್ ತಿರಂಗ ಅಭಿಯಾನ’ ಹೆಸರಿನಲ್ಲಿ ‘apk’ ಆಂಡ್ರಾಯ್ಡ್ ಅಪ್ಲಿಕೇಶನ್ ಡೌನ್ಲೋಡ್ ಮಾಡುವಂತೆ ಸಂದೇಶ ಬಂದಿತ್ತು. ಇದಲ್ಲದೆ, ಜನರು ತಮ್ಮ ಮಗುವಿನೊಂದಿಗೆ ರಾಷ್ಟ್ರಧ್ವಜದ ಚಿತ್ರವನ್ನು ಅಪ್ಲೋಡ್ ಮಾಡಬೇಕು ಎಂದು ಸೇನಾ ಶಾಲೆಗಳ ಅಧಿಕಾರಿಗಳನ್ನು ಅನುಕರಿಸುವ ಮೂಲಕ ಆ ಸಂಖ್ಯೆಗಳಿಗೆ ಸಂದೇಶಗಳನ್ನು ಕಳುಹಿಸಲಾಗಿದೆ. ಈ ವಾಟ್ಸಪ್ ನಂಬರ್ ಭಾರತದ್ದಾಗಿದ್ದು, ಲಾಭಶಂಕರ್ ಮಹೇಶ್ವರಿ ಇದನ್ನು ಪಾಕಿಸ್ತಾನಿ ಗುಪ್ತಚರ ಸಂಸ್ಥೆಗೆ ನೀಡಿದ್ದನು ಎಂದು ತನಿಖೆಯಿಂದ ತಿಳಿದುಬಂದಿದೆ. ಪಾಕಿಸ್ತಾನದ ಗುಪ್ತಚರ ಸಂಸ್ಥೆಯ ಜನರು ಈ ವಾಟ್ಸಪ್ ಸಂಖ್ಯೆಯನ್ನು ಬಳಸುತ್ತಿದ್ದರು. ಈ ಮೂಲಕ ಭಾರತದ ಭದ್ರತಾ ಸಿಬ್ಬಂದಿಯ ಮೊಬೈಲ್ಗಳನ್ನು ಹ್ಯಾಕ್ ಮಾಡುತ್ತಿದ್ದಾರೆ ಎಂದು ತಿಳಿದುಬಂದಿದೆ. ಲಾಭಶಂಕರ್ ರಹಸ್ಯಗಳನ್ನು ಬಹಿರಂಗಪಡಿಸಲು ಇನ್ನಷ್ಟು ವಿಚಾರಣೆ ನಡೆಸಲಾಗುತ್ತಿದೆ.

Join Whatsapp
Exit mobile version