SDPI ಗುರುಪುರ ಬ್ಲಾಕ್ ವತಿಯಿಂದ ಸ್ಪೋರ್ಟ್ಸ್ ಮೀಟ್ ಕಾರ್ಯಕ್ರಮ

Prasthutha|

ಜೂನ್ 21 ರಂದು ನಡೆಯುವ ಪಕ್ಷದ ಸಂಸ್ಥಾಪನಾ ದಿನದ ಪ್ರಯುಕ್ತ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಗುರುಪುರ ಬ್ಲಾಕ್ ‌ಸಮಿತಿಯ ವತಿಯಿಂದ ಸ್ಪೋರ್ಟ್ಸ್ ಮೀಟ್ ಕ್ರೀಡಾ ಕೂಟವು ಗಂಜಿಮಠ ನಾರ್ಲಪದವು ಮೈದಾನದಲ್ಲಿ ನಡೆಯಿತು

- Advertisement -

SDPI ದ.ಕ.ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಶ್ರಫ್ ಅಡ್ಡೂರು ಕ್ರೀಡಾ ಕೂಟಕ್ಕೆ ಚಾಲನೆಯನ್ನು ನೀಡಿದರು ಕಬಡ್ಡಿ, ಕ್ರಿಕೆಟ್, ಹಗ್ಗಜಗ್ಗಾಟ, ಮತ್ತು ಮಕ್ಕಳಿಗೆ ವಿವಿಧ ರೀತಿಯ ಪಂದ್ಯಾವಳಿಯನ್ನು ಆಯೋಜಿಸಲಾಯಿತು ಗುರುಪುರ ಬ್ಲಾಕ್ ವ್ಯಾಪ್ತಿಯ 11 ತಂಡಗಳು ಕ್ರೀಡಾ ಕೂಟದಲ್ಲಿ ಭಾಗವಹಿಸಿದ್ದವು ವಿಜೇತ ತಂಡಗಳಿಗೆ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು

ಈ ಸಂದರ್ಭದಲ್ಲಿ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರ ಸಮಿತಿಯ ಅಧ್ಯಕ್ಷ ಉಸ್ಮಾನ್ ಗುರುಪುರ, ಬ್ಲಾಕ್ ‌ಸಮಿತಿಯ ಅಧ್ಯಕ್ಷ ಅಶ್ರಫ್ ಕೈಕಂಬ, ಕಾರ್ಯದರ್ಶಿ ಇರ್ಶಾದ್ ಅಡ್ಡೂರು,ಗುರುಪುರ ಗ್ರಾಮ ಪಂಚಾಯತ್ ಸದಸ್ಯರಾದ ಎ.ಕೆ.ರಿಯಾಝ್,ಅಶ್ರಫ್ ಅಡ್ಡೂರು, ಮನ್ಸೂರ್ ಟಿಬೆಟ್,ಶಾಹಿಕ್ ಅಡ್ಡೂರು ಉಪಸ್ಥಿತರಿದ್ದರು

Join Whatsapp
Exit mobile version