ಕೇಕ್’ನಲ್ಲಿ ಸ್ಪೆಲಿಂಗ್ ಮಿಸ್ಟೇಕ್: ಸಿಬ್ಬಂದಿಗೆ ಚಾಕು ಇರಿದು ವ್ಯಕ್ತಿ ಪರಾರಿ

Prasthutha|

ಬೆಂಗಳೂರು: ಕೇಕ್ ನಲ್ಲಿ ಹೆಸರಿನ ಸ್ಪೆಲಿಂಗ್ ಸರಿಯಿಲ್ಲದ ಹಿನ್ನಲೆ ವ್ಯಕ್ತಿಯೊಬ್ಬ ಸಿಬ್ಬಂದಿಗೆ ಚಾಕುವಿನಿಂದ ಇರಿದು ಪರಾರಿಯಾದ ಘಟನೆ ಬೆಂಗಳೂರು ನಗರದ ತಿರುಮನಹಳ್ಳಿಯ ಬೇಕರಿಯಲ್ಲಿ ನಡೆದಿದೆ.

- Advertisement -


ಬೇಕರಿ ಸಿಬ್ಬಂದಿ ವಂಶಿ ಎಂಬುವವರ ಎರಡು ಕೈಗಳಿಗೆ ಚಾಕುವಿನಿಂದ ಹಲ್ಲೆ ಮಾಡಲಾಗಿದ್ದು, ಗಾಯಾಳು ಬೇಕರಿ ಸಿಬ್ಬಂದಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.


ಈ ಕುರಿತು ಕೊತ್ತನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದ್ದು, ಕೃತ್ಯ ಎಸಗಿ ಪರಾರಿಯಾದ ಆರೋಪಿಗಾಗಿ ಶೋಧಕಾರ್ಯ ನಡೆಸಲಾಗಿದೆ.