ಇಂದಿನಿಂದ ಹೊಸ ಸಂಸತ್ ಭವನದಲ್ಲಿ ವಿಶೇಷ ಅಧಿವೇಶನ ಆರಂಭ

Prasthutha|

ಹೊಸದಿಲ್ಲಿ: ಇಂದು ಹಳೇ ಸಂಸತ್​​​​ನಿಂದ ಹೊಸ ಸಂಸತ್ ಭವನಕ್ಕೆ ಕಲಾಪ ಶಿಫ್ಟ್​​​ ಆಗಲಿದ್ದು, ಸಂವಿಧಾನದ ಪ್ರತಿಯೊಂದಿಗೆ ಹೊಸ ಸಂಸತ್​​ಗೆ​ ಮೋದಿ ಆಗಮಿಸಲಿದ್ದಾರೆ.

- Advertisement -

ಹೊಸ ಸಂಸತ್ ಭವನದಲ್ಲಿ ಇಂದು ಮಧ್ಯಾಹ್ನ ಕಲಾಪ ಆರಂಭವಾಗಲಿದೆ. ಲೋಕಸಭೆಯಲ್ಲಿ ಮಧ್ಯಾಹ್ನ 1.15ಕ್ಕೆ ವಿಶೇಷ ಅಧಿವೇಶನ ಕಲಾಪ ಆರಂಭ. ರಾಜ್ಯಸಭೆಯಲ್ಲಿ ಮಧ್ಯಾಹ್ನ 2:15ಕ್ಕೆ ಕಲಾಪ ಆರಂಭವಾಗಲಿದೆ.

ಸಂಸದರ ಫೋಟೋಶೂಟ್

- Advertisement -

ಇಂದಿನಿಂದ ಹಳೇ ಸಂಸತ್​ ಭವನದಲ್ಲಿ ಕಲಾಪಕ್ಕೆ ವಿದಾಯ ಹಿನ್ನೆಲೆ ಇಂದು ಹಳೇ ಸಂಸತ್​​​ ಭವನದ ಮುಂದೆ ಸಂಸದರ ಫೋಟೋಶೂಟ್ ನಡೆದಿದ್ದು, ಬೆಳಗ್ಗೆ 9.30ಕ್ಕೆ ಫೋಟೋಶೂಟ್​​ನಲ್ಲಿ ಸಂಸದರು ಭಾಗಿಯಾಗಿದ್ದಾರೆ.