ಮಡಿಕೇರಿ: ನಗರದಲ್ಲಿ ನಡೆಸಿದ ಪ್ರತ್ಯೇಕ ಕಾರ್ಯಾಚರಣೆಯಲ್ಲಿ ಅರಣ್ಯ ಘಟಕದ ಸಿಐಡಿ ಪೊಲೀಸ್ ಅಧಿಕಾರಿಗಳು ಎರಡು ಆನೆದಂತ ಹಾಗೂ ನಕ್ಷತ್ರ ಆಮೆಗಳನ್ನು ವಶಪಡಿಸಿಕೊಂಡು ಐವರನ್ನು ಬಂಧಿಸಿದ ಘಟನೆ ನಡೆದಿದೆ.
ನಗರದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನ ಹಿಂಭಾಗದ ರಸ್ತೆಯಲ್ಲಿರುವ ಮುಳಿಯ ಬಸ್ ತಂಗುದಾಣದಲ್ಲಿ ಎರಡು ಆನೆದಂತಗಳನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದಾಗ ಮಹದೇವಸ್ವಾಮಿ, ಜಿ.ಗುರು ಹಾಗೂ ಪಿ.ಹೇಮಂತರಾಜ್ ಎಂಬವರನ್ನುಬಂಧಿಸಲಾಗಿದೆ.
ಎರಡು ಜೀವಂತ ನಕ್ಷತ್ರ ಆಮೆಗಳನ್ನು ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದಾಗ ಮಡಿಕೇರಿಯ ಕನ್ನಂಡ ಪಡೆಬಿರ ವೃತ್ತದ ಬಳಿಯ ಬಸ್ ತಂಗುದಾಣದಲ್ಲಿ ಸುರೇಶ್ ಮತ್ತು ಶರವಣನ್ ಎಂಬವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಡಿಕೇರಿ ಸಿಐಡಿ ಪೊಲೀಸ್ ಅರಣ್ಯ ಘಟಕದ ಪ್ರಭಾರ ಎಸ್.ಪಿ. ಶ್ರೀನಿವಾಸ್‌ರೆಡ್ಡಿ ಅವರ ನೇತೃತ್ವದಲ್ಲಿ ಸಬ್‌ಇನ್‌ಸ್ಪೆಕ್ಟರ್ ಸಿ.ಯು.ಸವಿ, ಹೆಡ್‌ಕಾನ್‌ಸ್ಟೆಬಲ್‌ಗಳಾದ ಶೇಖರ್, ರಾಜೇಶ್, ರಾಘವೇಂದ್ರ, ಯೋಗೇಶ್, ಮೋಹನ್, ಕಾನ್‌ಸ್ಪೆಬಲ್‌ಗಳಾದ ಮಂಜುನಾಥ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.