Home ಕರಾವಳಿ ಮಂಗಳೂರು ವಿ.ವಿಯ ಸ್ವಾತಂತ್ರ್ಯ ದಿನಾಚರಣೆಗೆ RSS ಪ್ರಚಾರಕನಿಗೆ ವಿಶೇಷ ಆಹ್ವಾನ: ಪ್ರತಿಭಟನೆಯ ಎಚ್ಚರಿಕೆ

ಮಂಗಳೂರು ವಿ.ವಿಯ ಸ್ವಾತಂತ್ರ್ಯ ದಿನಾಚರಣೆಗೆ RSS ಪ್ರಚಾರಕನಿಗೆ ವಿಶೇಷ ಆಹ್ವಾನ: ಪ್ರತಿಭಟನೆಯ ಎಚ್ಚರಿಕೆ

ಮಂಗಳೂರು: ಭಾರತದ 75ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಮಂಗಳೂರು ವಿಶ್ವ ವಿದ್ಯಾನಿಲಯವು ಆರ್ ಎಸ್ ಎಸ್ ಪ್ರಾಂತ್ ಸಹ ಪ್ರಚಾರಕ್ ರಾಜೇಶ್ ಪದ್ಮಾರ್ ಅವರನ್ನು ವಿಶೇಷ ಉಪನ್ಯಾಸಕ್ಕೆ ಆಹ್ವಾನ ನೀಡಿದೆ.


ಭಾರತದ 75ನೇ ಸ್ವಾತಂತ್ರ್ಯೋತ್ಸವದ ‘ಅಮೃತ ಮಹೋತ್ಸವ ‘ ದ ಅಂಗವಾಗಿ ಮಂಗಳೂರು ವಿಶ್ವ ವಿದ್ಯಾನಿಲಯದ ಆಮಂತ್ರಣ ಪತ್ರಿಕೆಯಲ್ಲಿ ಉಪನ್ಯಾಸಕರು, ಸಾಮಾಜಿಕ ಕಾರ್ಯಕರ್ತರೂ ಆದ ರಾಜೇಶ್ ಪದ್ಮಾರ್ ಅವರು ವಿಶೇಷ ಉಪನ್ಯಾಸ ನೀಡಲಿದ್ದಾರೆ ಎಂದು ಉಲ್ಲೇಖಿಸಲಾಗಿದೆ. ಆದರೆ ಅವರು ಆರೆಸ್ಸೆಸ್ ನ ಪ್ರಚಾರಕ ಎಂಬುದನ್ನು ಆಹ್ವಾನ ಪತ್ರಿಕೆಯಲ್ಲಿ ಪ್ರಸ್ತಾಪಿಸದೆ ಕೇವಲ ಉಪನ್ಯಾಸಕ ಎಂದು ತಿಳಿಸಲಾಗಿದೆ.


ಸುಬ್ರಹ್ಮಣ್ಯ ಯಡಪಡಿತ್ತಾಯ ಅವರು ಮಂಗಳೂರು ವಿಶ್ವ ವಿದ್ಯಾನಿಲಯದ ಕುಲಪತಿ ಆದ ಬಳಿಕ ಕೇವಲ ಆರ್ ಎಸ್ ಎಸ್ ಹಿನ್ನೆಲೆಯುಳ್ಳ ವ್ಯಕ್ತಿಗಳನ್ನು ಮಾತ್ರ ಕರೆಯುತ್ತಿದ್ದಾರೆ. ಇಂತಹ ವ್ಯಕ್ತಿಗಳನ್ನು ಕರೆಯುವುದರಿಂದ ಸಮಾಜದಲ್ಲಿ ಅಶಾಂತಿ ಸೃಷ್ಟಿಯಾಗುತ್ತಿದೆ ಎಂದು ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿದೆ.


ಅಲ್ಲದೆ, ಆರ್ ಎಸ್ ಎಸ್ ಪ್ರಾಂತ್ ಸಹ ಪ್ರಚಾರಕ್ ರಾಜೇಶ್ ಪದ್ಮಾರ್ ಆಹ್ವಾನಿಸಿರುವುದಕ್ಕೆ ವಿರೋಧ ವ್ಯಕ್ತಪಡಿಸಿರುವ ವಿದ್ಯಾರ್ಥಿಗಳು, ಪ್ರತಿಭಟನೆಯ ಎಚ್ಚರಿಕೆ ನೀಡಿದ್ದಾರೆ.

Join Whatsapp
Exit mobile version