ಮಂಗಳೂರು: ಕೇಂದ್ರ ಚುನಾವಣಾ ಆಯೋಗವು ರಾಷ್ಟ್ರೀಯ ಮತದಾರರ ಪಟ್ಟಿಗಳ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ 2023ರ ವೇಳಾಪಟ್ಟಿ ಈ ಕೆಳಗಿನಂತಿದೆ. ಮತದಾರರ ಪಟ್ಟಿ ಪೂರ್ವ ಪರಿಷ್ಕರಣೆ ಚಟುವಟಿಕೆಗಳು ಮುಕ್ತಾಯಗೊಂಡಿವೆ.
ಕರಡು ಮತದಾರರ ಪಟ್ಟಿಯ ಪ್ರಕಟಣೆ 2022 ನ.9ರಿಂದ ಪ್ರಾರಂಭಗೊಳ್ಳಲಿದೆ. ಹಕ್ಕು ಮತ್ತು ಆಕ್ಷೇಪಣೆಗಳನ್ನು ಸ್ವೀಕರಿಸುವ ಅವಧಿ ನ.9 ರಿಂದ ಡಿಸೆಂಬರ್ 8ರ ವರೆಗೆ ನಡೆಯಲಿದೆ.
ವಿಶೇಷ ನೋಂದಣಿ ಅಭಿಯಾನವು ಕ್ರಮವಾಗಿ 2022 ನ.12, 20 ಹಾಗೂ ಡಿಸೆಂಬರ್ 3 ಮತ್ತು 4ರಂದು ನಡೆಯಲಿದೆ. ಹಕ್ಕು ಮತ್ತು ಆಕ್ಷೇಪಣೆಗಳ ವಿಲೇವಾರಿ 2022ರ ಡಿಸೆಂಬರ್ 26ರ ವರೆಗೆ ನಡೆಯಲಿದೆ.
2023ರ ಜನವರಿ 3ರಂದು ಡೇಟಾಬೇಸ್ ಮತ್ತು ಪೂರಕ ಮುದ್ರಣವನ್ನು ನವೀಕರಿಸಲಾಗುವುದು ಹಾಗೂ ಅಂತಿಮ ಮತದಾರರ ಪಟ್ಟಿಯು 2023ರ ಜನವರಿ 5ರಂದು ಪ್ರಕಟಗೊಳ್ಳಲಿದೆ ಎಂದು ಪ್ರಕಟಣೆ ತಿಳಿಸಿದೆ.