Home ಟಾಪ್ ಸುದ್ದಿಗಳು ಉಪರಾಷ್ಟ್ರಪತಿ ಜಗದೀಪ್ ಧನಕರ್ ರನ್ನು ಭೇಟಿ ಮಾಡಿದ ಸ್ಪೀಕರ್ ಯು.ಟಿ.ಖಾದರ್

ಉಪರಾಷ್ಟ್ರಪತಿ ಜಗದೀಪ್ ಧನಕರ್ ರನ್ನು ಭೇಟಿ ಮಾಡಿದ ಸ್ಪೀಕರ್ ಯು.ಟಿ.ಖಾದರ್

ಶಾಸನ ಸಭೆಯ ಗೌರವ ಕಾಪಾಡಿ ಉಪರಾಷ್ಟ್ರಪತಿ ಸಲಹೆ


ಬೆಂಗಳೂರು: ಕರ್ನಾಟಕ ವಿಧಾನಸಭೆಯ ಸಭಾಧ್ಯಕ್ಷರಾಗಿ ಆಯ್ಕೆಯಾದ ಬಳಿಕ ಸ್ಪೀಕರ್ ಯು.ಟಿ.ಖಾದರ್ ಅವರು ದೆಹಲಿಯಲ್ಲಿ ಉಪರಾಷ್ಟ್ರಪತಿ ಜಗದೀಪ್ ಧನಕರ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.


ಸಭಾಧ್ಯಕ್ಷರಾಗಿ ಕಾರ್ಯಸಲ್ಲಿಸುವಷ್ಟು ದಿನ ಸದನದ ಘನತೆ, ಗೌರವ ಎತ್ತಿಹಿಡಿದು ಶಾಸಕರ ಹಾಗೂ ರಾಜ್ಯದ ಜನರ ಮನಗೆಲ್ಲಿ ಎಂದು ಸಲಹೆ ನೀಡಿದರು. ಈ ಚಿಕ್ಕ ವಯಸ್ಸಿನಲ್ಲೇ ಸಭಾಧ್ಯಕ್ಷರಾಗಿ ಸೇವೆ ಸಲ್ಲಿಸಲು ಅವಕಾಶ ಸಿಕ್ಕಿರುವುದು ಸುದೈವ. ಕರ್ನಾಟಕ ರಾಜ್ಯದ ಜನರ ಸಂಸ್ಕೃತಿ, ಆಚಾರ ವಿಚಾರದ ಬಗ್ಗೆ ನನಗೆ ಅಪಾರ ಗೌರವವಿದ್ದು ಶಾಸನ ಸಭೆಯ ನಡವಳಿಕೆಯ ಯಾವುದೇ ಮಾರ್ಗದರ್ಶನಕ್ಕಾಗಿ ನಾನು ನಿಮ್ಮೊಂದಿಗೆ ಇದ್ದೇನೆ ಎಂದು ಹೇಳಿದ್ದಾರೆ.


ಇದೇ ಸಂದರ್ಭದಲ್ಲಿ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ರವರನ್ನು ಕೂಡ ಸ್ಪೀಕರ್ ಯು.ಟಿ.ಖಾದರ್ ಅವರು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.

Join Whatsapp
Exit mobile version