Home ಟಾಪ್ ಸುದ್ದಿಗಳು ಉಳ್ಳಾಲ: ಅಂತಿಮಯಾತ್ರೆಗೆ ಹೆಗಲುಕೊಟ್ಟ ಸ್ಪೀಕರ್ ಯು.ಟಿ ಖಾದರ್

ಉಳ್ಳಾಲ: ಅಂತಿಮಯಾತ್ರೆಗೆ ಹೆಗಲುಕೊಟ್ಟ ಸ್ಪೀಕರ್ ಯು.ಟಿ ಖಾದರ್

ಉಳ್ಳಾಲ: ಮುಡಿಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಶಾಂತ್ ಕಾಜವ ಅವರ ಸಹೋದರ ಶರತ್ ಕಾಜವ (55) ಹೃದಯಾಘಾತಕ್ಕೊಳಗಾಗಿ ಭಾನುವಾರ ಮರಣಹೊಂದಿದ್ದು, ಅವರ ಅಂತಿಮಯಾತ್ರೆಯಲ್ಲಿ ಭಾಗವಹಿಸಿದ ವಿಧಾನಸಭಾಧ್ಯಕ್ಷ ಯು.ಟಿ ಖಾದರ್ ಶವಯಾತ್ರೆ ವೇಳೆ ಹೆಗಲುಕೊಟ್ಟು ಮಾನವೀಯತೆ ಮೆರೆದಿದ್ದಾರೆ.


ಶರತ್ ಕಾಜವ ನಿಧನರಾದ ಸುದ್ದಿ ತಿಳಿಯುತ್ತಿದ್ದಂತೆಯೇ ಯು.ಟಿ ಖಾದರ್ ಅವರು ಪೂರ್ವನಿಗದಿ ಪಡಿಸಿದ ಎಲ್ಲಾ ಕಾರ್ಯಕ್ರಮಗಳನ್ನು ರದ್ದುಪಡಿಸಿ ತಕ್ಷಣವೇ ಮಿತ್ತಕೋಡಿಯ ಕಾಜವ ಅವರ ಮನೆಗೆ ಧಾವಿಸಿದರು. ಸಂಬಂಧಿಕರಲ್ಲಿ ಧೈರ್ಯ ತುಂಬಿದ ಅವರು ನಂತರ ನಡೆದ ಅಂತಿಮಯಾತ್ರೆಗೆ ಹೆಗಲುಕೊಟ್ಟರು.

Join Whatsapp
Exit mobile version