ವಿಧಾನಸೌಧದಲ್ಲೇ ಶಾಸಕರಿಗೆ ಮಧ್ಯಾಹ್ನದ ಊಟ: ಸ್ಪೀಕರ್ ಖಾದರ್ ಘೋಷಣೆ

Prasthutha|

ಬೆಂಗಳೂರು: ವಿಧಾನಸೌಧದಲ್ಲೇ ಶಾಸಕರಿಗೆ ಮಧ್ಯಾಹ್ನದ ಊಟ ನೀಡಲಾಗುವುದು ಎಂದು ಸ್ಪೀಕರ್ ಖಾದರ್ ಇಂದು ಸದನದಲ್ಲಿ ಘೋಷಣೆ ಮಾಡಿದ್ದಾರೆ.

- Advertisement -


ಈಗಾಗಲೇ ಬೆಳಗ್ಗೆ ತಿಂಡಿಯ ವ್ಯವಸ್ಥೆ ಮಾಡಿರುವ ಸ್ಪೀಕರ್, ಇದೀಗ ತಿಂಡಿ ಜೊತೆಗೆ ಊಟವೂ ಫ್ರೀ ಎಂದು ಹೇಳಿದ್ದಾರೆ. ಶಾಸಕರಿಗೆ ಮಧ್ಯಾಹ್ನದ ಊಟಕ್ಕೂ ವಿಧಾನಸೌಧದಲ್ಲೇ ವ್ಯವಸ್ಥೆ ಮಾಡಲಾಗುವುದು. ನೀವು ಎಲ್ಲಿ ಹೋದರೂ ಇಲ್ಲಿಗಿಂತ ಬೆಸ್ಟ್ ಊಟ ನಿಮಗೆ ಸಿಗಲ್ಲ ಎಂದು ಖಾದರ್ ಹೇಳಿದ್ದಾರೆ.


ಶಾಸಕರು ಸಮಯಕ್ಕೆ ಸರಿಯಾಗಿ ಬರದೇ ಮಧ್ಯಾಹ್ನದ ಕಲಾಪ ಆರಂಭ ವಿಳಂಬ ಆಗುತ್ತಿದೆ. ಈ ಹಿನ್ನೆಲೆಯಲ್ಲಿ ಸ್ಪೀಕರ್ ಈ ಘೋಷಣೆಯನ್ನು ಮಾಡಿದ್ದಾರೆ.
ಸ್ಪೀಕರ್ ಮಾತಿಗೆ ಮಾಜಿ ಸಚಿವ ಆರಗ ಜ್ಞಾನೆಂದ್ರ ತಮಾಷೆ ಮಾಡಿದ್ದಾರೆ. ಜೊತೆಗೆ ಹಾಸಿಗೆ, ದಿಂಬು ಕೊಟ್ಬಿಡಿ, ಇಲ್ಲೇ ಸುಖವಾಗಿ ನಿದ್ದೇನೂ ಮಾಡಿಬಿಡ್ತೀವಿ ಎಂದು ಹೇಳುವ ಮೂಲಕ ಖಾದರ್ ಕಾಲೆಳೆದಿದ್ದಾರೆ.



Join Whatsapp