ತಾಲಿಬಾನ್ ಕುರಿತ ಹೇಳಿಕೆಗೆ ದೇಶದ್ರೋಹ ಪ್ರಕರಣ ದಾಖಲಿಸಿದ ಸರ್ಕಾರವೇ ಅವರೊಂದಿಗೆ ಮಾತುಕತೆ ನಡೆಸಿದೆ : ಸಂಸದ ಶಫಿಕುರ್ ರಹ್ಮಾನ್ ಕಿಡಿ

Prasthutha|

ಸಂಭಾಲ್: ಸಮಾಜವಾದಿ ಪಕ್ಷದ ಸಂಸದರಾದ ಶಫಿಕುರ್ ರಹ್ಮಾನ್ ಬಾರ್ಕ ಅವರ ವಿರುದ್ಧ ತಾಲಿಬಾನ್ ಕುರಿತ ಹೇಳಿಕೆಗಾಗಿ ದೇಶದ್ರೋಹ ಪ್ರಕರಣವನ್ನು ದಾಖಲಿಸಲಾಗಿತ್ತು. ಆದರೆ ಪ್ರಸಕ್ತ ಸರ್ಕಾರ ದೋಹಾದಲ್ಲಿ ತಾಲಿಬಾನ್ ಪ್ರತಿನಿಧಿಗಳೊಂದಿಗೆ ಮಾತುಕತೆ ನಡೆಸಿ ದ್ವಿಮುಖ ದೋರಣೆ ತಾಳಿರುವ ನಡೆಯನ್ನು ಅವರು ಪ್ರಶ್ನಿಸಿದ್ದಾರೆ.

- Advertisement -

ನಾನು ತಾಲಿಬಾನ್ ಕುರಿತು ಒಂದು ಸಣ್ಣ ಹೇಳಿಕೆಯನ್ನು ನೀಡಿದ್ದೆ. ಈ ಹಿನ್ನೆಲೆಯಲ್ಲಿ ನನ್ನ ಮೇಲೆ ದೇಶದ್ರೋಹದ ಕ್ರಿಮಿನಲ್ ಪ್ರಕರಣವನ್ನು ದಾಖಲಿಸಲಾಯಿತು. ಈಗ ಸರ್ಕಾರವೇ ದೋಹಾದಲ್ಲಿ ತಾಲಿಬಾನ್ ಜೊತೆ ಮಾತುಕತೆ ನಡೆಸಿರುವುದು ಇವರ ದ್ವಂದ್ವ ನಿಲುವನ್ನು ಹೊರಹಾಕಿದೆ ಎಂದು ಶಫಿಕುರ್ ರಹ್ಮಾನ್ ಬಾರ್ಕ್ ತಿಳಿಸಿದರು. ಭಾರತ ಮತ್ತು ತಾಲಿಬಾನ್ ನಡುವೆ ಇತ್ತೀಚೆಗೆ ಕತಾರ್ ನ ದೋಹಾದಲ್ಲಿ ನಡೆದ ಸಭೆಯ ಹಿನ್ನೆಲೆಯಲ್ಲಿ ಎಸ್ಪಿ ಸಂಸದರ ಹೇಳಿಕೆ ಹೊರಬಿದ್ದಿದೆ.

ಈ ಹಿಂದೆ ರಹ್ಮಾನ್ ಬಾರ್ಕ್ ಅವರು ತಾಲಿಬಾನ್ ಅಫ್ಘಾನ್ ಜನತೆಯ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿದೆ ಮತು ಭಾರತ ಕೂಡ ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸಿತ್ತು ಹೇಳಿಕೆ ನೀಡಿದರು. ಈ ಹಿನ್ನೆಲೆಯಲ್ಲಿ ಬಿಜೆಪಿ ನಾಯಕರೊಬ್ಬರ ದೂರಿನ ಆಧಾರದಲ್ಲಿ ಅವರ ಮೇಲೆ ದೇಶದ್ರೋಹ ಪ್ರಕರಣ ದಾಖಲಿಸಲಾಗಿತ್ತು.

- Advertisement -

ಈ ಹೇಳಿಕೆಗೆ ಪ್ರತಿಕ್ರಿಯಿಸಿದ ಸಂಭಲ್ ಪೊಲೀಸ್ ವರಿಷ್ಠಾಧಿಕಾರಿ ಚಕ್ರೇಶ್ ಮಿಶ್ರಾ ಅವರು, ಭಾರತ ಸರ್ಕಾರವು ತಾಲಿಬಾನ್ ಅನ್ನು ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿದೆ. ಈ ನಿಟ್ಟಿನಲ್ಲಿ ತಾಲಿಬಾನ್ ಅನ್ನು ಹೊಗಳುವುದು ಅಥವಾ ನಡೆಯನ್ನು ಸಮರ್ಥಿಸುವುದು ದೇಶದ್ರೋಹದ ಕೃತ್ಯವೆಂದು ತಿಳಿಸಿದ್ದಾರೆ. ಇತ್ತೀಚಿಗೆ ನಡೆದ ಬೆಳವಣಿಗೆಯಲ್ಲಿ ಕತಾರ್ ನ ಭಾರತೀಯ ರಾಯಭಾರಿ ದೀಪಕ್ ಮಿತ್ತಲ್ ತಾಲಿಬಾನ್ ರಾಜಕೀಯ ವಿಭಾಗದ ಮುಖ್ಯಸ್ಥ ಶೇರ್ ಅಬ್ಬಾಸ್ ಸ್ಟಾನೆಕ್ ಜಾಯ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದರು.

Join Whatsapp