Home ಟಾಪ್ ಸುದ್ದಿಗಳು ‘ಶಿವಶಕ್ತಿ ಪಾಯಿಂಟ್’ ಹೆಸರಿನ ಹಿಂದೆ ಕೋಮು ಬಣ್ಣ : ಸಂಸದ ಶಫೀಕುರ್ ರೆಹಮಾನ್

‘ಶಿವಶಕ್ತಿ ಪಾಯಿಂಟ್’ ಹೆಸರಿನ ಹಿಂದೆ ಕೋಮು ಬಣ್ಣ : ಸಂಸದ ಶಫೀಕುರ್ ರೆಹಮಾನ್

ಸಂಭಾಲ್ ​(ಉತ್ತರ ಪ್ರದೇಶ): ಚಂದ್ರನ ಅಂಗಳದಲ್ಲಿ ವಿಕ್ರಮ್ ಲ್ಯಾಂಡರ್ ಸ್ಪರ್ಶಿಸಿದ ಸ್ಥಳವನ್ನು ‘ಶಿವಶಕ್ತಿ ಪಾಯಿಂಟ್’ ಎಂದು ಹೆಸರಿಸುವ ಉದ್ದೇಶದ ಹಿಂದೆ ಕೋಮು ಬಣ್ಣವಿದೆ ಎಂದು ಸಮಾಜವಾದಿ ಪಕ್ಷದ ಸಂಸದ ಶಫೀಕುರ್ ರೆಹಮಾನ್ ಆರೋಪಿಸಿದ್ದಾರೆ.

ಚಂದ್ರಯಾನ-3 ಯೋಜನೆ ಯಶಸ್ವಿಯಾದ ಬೆನ್ನಲ್ಲೇ ಶನಿವಾರ ಪ್ರಧಾನಿ ನರೇಂದ್ರ ಮೋದಿ, ವಿಕ್ರಮ್ ಲ್ಯಾಂಡರ್ ಚಂದ್ರನನ್ನು ಸ್ಪರ್ಶಿಸಿದ ಸ್ಥಳವನ್ನು ‘ಶಿವಶಕ್ತಿ ಪಾಯಿಂಟ್’ ಎಂದು ಘೋಷಿಸಿದ್ದರು.

‘ಶಿವಶಕ್ತಿ ಪಾಯಿಂಟ್’ ಎಂದು ಕರೆದಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಶಫೀಕುರ್ ರೆಹಮಾನ್, ಬಿಜೆಪಿಯವರು ಯಾಕೆ ಎಲ್ಲವನ್ನೂ ಕೋಮುವಾದ ಮಾಡಬಯಸುತ್ತಾರೆ ಎಂದು ಪ್ರಶ್ನಿಸಿದ್ದಾರೆ.

ಅಬ್ದುಲ್ ಕಲಾಂ ಹೆಸರು ಸೂಕ್ತ:

 ಮೋದಿ ನಿರ್ಧಾರವನ್ನು ವಿರೋಧಿಸಿರುವ ಎಸ್​ಪಿ ಸಂಸದ, ವಿಕ್ರಮ್ ಲ್ಯಾಂಡರ್ ಚಂದ್ರನನ್ನು ಸ್ಪರ್ಶಿಸಿದ ಸ್ಥಳಕ್ಕೆ ಮಾಜಿ ರಾಷ್ಟ್ರಪತಿ ಎ.ಪಿ.ಜೆ.ಅಬ್ದುಲ್ ಕಲಾಂ ಹೆಸರಿಡಬೇಕಿತ್ತು. ಇಂಥ ಯೋಜನೆಗಳಿಗೆ ಅಡಿಪಾಯ ಹಾಕಿರುವವರೇ ವಿಜ್ಞಾನಿ ಎ.ಪಿ.ಜೆ.ಅಬ್ದುಲ್ ಕಲಾಂ. ಹಾಗಾಗಿ ಅವರದ್ದೇ ಹೆಸರಿಡಬೇಕು. ಚಂದ್ರನ ಮೇಲಿನ ಈ ಸಾಧನೆಗೆ ಹಿಂದೂ-ಮುಸ್ಲಿಂ ಬಣ್ಣ ಹಚ್ಚಬಾರದಿತ್ತು ಎಂದರು.

Join Whatsapp
Exit mobile version