Home ಟಾಪ್ ಸುದ್ದಿಗಳು ಉತ್ತರಪ್ರದೇಶ: ‘ಸ್ಟ್ರಾಂಗ್ ರೂಂ’ ಎದುರು ದುರ್ಬೀನು ಹಿಡಿದು ಕಾವಲು ನಿಂತ ಎಸ್‌ಪಿ ಅಭ್ಯರ್ಥಿ!

ಉತ್ತರಪ್ರದೇಶ: ‘ಸ್ಟ್ರಾಂಗ್ ರೂಂ’ ಎದುರು ದುರ್ಬೀನು ಹಿಡಿದು ಕಾವಲು ನಿಂತ ಎಸ್‌ಪಿ ಅಭ್ಯರ್ಥಿ!

ಲಖ್ನೋ: ಉತ್ತರಪ್ರದೇಶ ಚುನಾವಣೆಯ ನಂತರ ಸಮಾಜವಾದಿ ಪಕ್ಷದ ಅಭ್ಯರ್ಥಿಯೊಬ್ಬರು ಮತದಾನ ಪೆಟ್ಟಿಗೆಯನ್ನು (ಇವಿಎಂ) ಇಟ್ಟಿರುವ ಸ್ಟ್ರಾಂಗ್‌ ರೂಂ ಬಳಿ ದುರ್ಬೀನು ಹಿಡಿದು ಕಾವಲು ನಿಂತಿದ್ದಾರೆ.

ಮೀರತ್‌ನ ಮೀರತ್‌ನ ಹಸ್ತಿನಾಪುರ ವಿಧಾನಸಭಾ ಕ್ಷೇತ್ರದ ಎಸ್.ಪಿ ಅಭ್ಯರ್ಥಿ ಯೋಗೇಶ್ ವರ್ಮಾ ಅವರು ಮತ ಎಣಿಕೆ ಕೇಂದ್ರದ ಹೊರಗೆ ಅಕ್ರಮ ನಡೆಯುವುದನ್ನು ತಡೆಯಲು ದುರ್ಬೀನು ಹಿಡಿದು ಕಾವಲು ನಿಂತಿರುವ ವಿಡಿಯೋ ವ್ಯಾಪಕ ವೈರಲಾಗಿದೆ. ಸ್ಟ್ರಾಂಗ್ ರೂಮಿನಿಂದ 400 ಮೀಟರ್ ದೂರದಲ್ಲಿ ತೆರೆದ ಜೀಪನ್ನು ನಿಲ್ಲಿಸಿ ದುರ್ಬಿನು ಹಿಡಿದು ನಿಂತಿರುವ ಅವರು, ಸ್ಟ್ರಾಂಗ್‌ ರೂಂಗಳು ಮತ್ತು ಅದರ ಸುತ್ತಮುತ್ತಲಿನ ಚಲನವಲನಗಳ ಮೇಲೆ ನಿಗಾ ಇಡಲು ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್‌‌ ನಮಗೆ ನಿರ್ದೇಶನ ನೀಡಿದ್ದಾರೆ. ಹೀಗಾಗಿ ನಾವು ಅವರ ಸಲಹೆಯನ್ನು ಅನುಸರಿಸುತ್ತಿದ್ದೇವೆ ಎಂದು ತಿಳಿಸಿದ್ದಾರೆ. ಉತ್ತರ ಪ್ರದೇಶದಲ್ಲಿ ಒಟ್ಟು ಏಳು ಹಂತಗಳ ಮತನಾದ ನಡೆದಿದ್ದು, ಫಲಿತಾಂಶ ಮಾ.10 ರಂದು ಮತ ಎಣಿಕೆ ನಡೆಯಲಿದೆ.

Join Whatsapp
Exit mobile version