Home ಟಾಪ್ ಸುದ್ದಿಗಳು ದಕ್ಷಿಣ ಭಾರತದ ಮೊದಲ ರೋಡ್-ಕಮ್-ರೈಲು ಮೇಲ್ಸೇತುವೆ ಲೋಕಾರ್ಪಣೆ

ದಕ್ಷಿಣ ಭಾರತದ ಮೊದಲ ರೋಡ್-ಕಮ್-ರೈಲು ಮೇಲ್ಸೇತುವೆ ಲೋಕಾರ್ಪಣೆ

ಬೆಂಗಳೂರು: ರಾಗಿಗುಡ್ಡದಲ್ಲಿ ದಕ್ಷಿಣ ಭಾರತದ ಅತಿ ಎತ್ತರದ ರೋಡ್-ಕಮ್-ರೈಲು ಮೇಲ್ಸೇತುವೆ ಬುಧವಾರ (ಜು.17) ಲೋಕಾರ್ಪಣೆಗೊಂಡಿದ್ದು, ಪ್ರಾಯೋಗಿಕ ವಾಹನ ಸಂಚಾರಕ್ಕೆ ಚಾಲನೆ ನೀಡಲಾಗಿದೆ.

449 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿರುವ 3.36 ಕಿಮೀ ಉದ್ದದ ಡಬ್ಬಲ್‌ ಡೆಕ್ಕರ್‌ ಫ್ಲೈ ಓವರ್‌ ಅನ್ನು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್‌ ಮತ್ತು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಲೋಕಾರ್ಪಣೆಗೊಳಿಸಿದರು. ಬಳಿಕ ಖುದ್ದು ಡಿಕೆ ಶಿವಕುಮಾರ್‌ ಅವರೇ ಫ್ಲೈಓವರ್‌ ರಸ್ತೆಯಲ್ಲಿ ಕಾರು ಓಡಿಸುವ ಮೂಲಕ ಪ್ರಾಯೋಗಿಕ ವಾಹನ ಸಂಚಾರಕ್ಕೆ ಚಾಲನೆ ನೀಡಿದರು.

ರಾಗಿಗುಡ್ಡದಿಂದ ಸಿಲ್ಕ್ ಬೋರ್ಡ್‌ವರೆಗೆ ನಿರ್ಮಾಣವಾಗಿರುವ ಡಬ್ಬಲ್ ಡೆಕ್ಕರ್‌ ಫ್ಲೈ ಓವರ್‌ ಎರಡೂ ಬದಿಗಳಲ್ಲಿ ಎರಡು ರಸ್ತೆ ಮಾರ್ಗ ನಿರ್ಮಿಸಲಾಗಿದ್ದು, ಇಲ್ಲಿ ಬಸ್ಸು, ಕಾರು ಸೇರಿ ಎಲ್ಲಾ ರೀತಿಯ ವಾಹನಗಳು ಸಂಚರಿಸಲಿವೆ.

Join Whatsapp
Exit mobile version