Home ರಾಜ್ಯ ಸೌತ್ ಇಂಡಿಯ ಗಾರ್ಮೆಂಟ್ಸ್ ಅಸೋಸಿಯೇಷನ್ ನಿಂದ ಮೂರು ದಿನಗಳ ಸೌತ್ ಇಂಡಿಯ ಗಾರ್ಮೆಂಟ್ಸ್ ಬಿ 2...

ಸೌತ್ ಇಂಡಿಯ ಗಾರ್ಮೆಂಟ್ಸ್ ಅಸೋಸಿಯೇಷನ್ ನಿಂದ ಮೂರು ದಿನಗಳ ಸೌತ್ ಇಂಡಿಯ ಗಾರ್ಮೆಂಟ್ಸ್ ಬಿ 2 ಬಿ ಮೇಳ

►100 ಕೋಟಿ ರೂ ವಹಿವಾಟು ನಿರೀಕ್ಷೆ – ಏಕರೂಪ ಜಿ.ಎಸ್.ಟಿ ದರ ನಿಗದಿಪಡಿಸುವಂತೆ ಒತ್ತಾಯ

ಬೆಂಗಳೂರು; ಸೌತ್ ಇಂಡಿಯಾ ಗಾರ್ಮೆಂಟ್ಸ್ ಅಸೋಸಿಯೇಷನ್ ನಿಂದ ಮೂರು ದಿನಗಳ ಅತಿ ದೊಡ್ಡ ಗಾರ್ಮೆಂಟ್ಸ್ ಮೇಳ ಇಂದಿನಿಂದ ಆರಂಭವಾಗಿದ್ದು, ಬಿ2ಬಿ ಮೇಳದಲ್ಲಿ ವೈವಿದ್ಯಮ ಬ್ರಾಂಡ್ ಗಳ ಜವಳಿ ಉಡುಪು ವಲಯದಲ್ಲಿ 100 ಕೋಟಿ ರೂ ಗಿಂತ ಹೆಚ್ಚು ವಹಿವಾಟು ನಡೆಯುವ ನಿರೀಕ್ಷೆಯಿದೆ.

ಬೆಂಗಳೂರು ಅರಮನೆ ಮೈದಾನದ ಪ್ರಿನ್ಸೆಸ್ ಶ್ರೇನ್ ನಲ್ಲಿ ಮೇಳ ನಡೆಯುತ್ತಿದ್ದು, ಇದು ನೇರವಾಗಿ ವ್ಯಾಪಾರಿಗಳಿಂದ ವ್ಯಾಪಾರಿಗಳಿಗಾಗಿ ಇರುವ ಮೇಳವಾಗಿದೆ. ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು ಮತ್ತಿತರ ರಾಜ್ಯಗಳ ವ್ಯಾಪಾರಿಗಳು ಮೇಳದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. 100 ಕ್ಕೂ ಹೆಚ್ಚು ಬ್ರಾಂಡ್ ಗಳ ಸಿದ್ಧ ಉಡುಪುಗಳ ಮಳಿಗೆಗಳನ್ನು ತೆರೆಯಲಾಗಿದೆ.

ಚನ್ನಬಸಪ್ಪ ಆಂಡ್ ಸನ್ಸ್ ವ್ಯವಸ್ಥಾಪಕ ನಿರ್ದೇಶಕ ಬಿ.ಸಿ.ಶಿವಕುಮಾರ್ ಮೇಳಕ್ಕೆ ಚಾಲನೆ ನೀಡಿದರು. ಐ.ಆರ್.ಡಿ.ಎಸ್.ನಾ ಜಿ.ಆರ್.ಅರ್ಕಾದಾಸ್, ಚಿತ್ರನಟಿ ಕಾವ್ಯ ಶೆಟ್ಟಿ, ಸೌತ್ ಇಂಡಿಯಾ ಗಾರ್ಮೆಂಟ್ ಉತ್ಪಾದಕರ ಸಂಘದ ಅಧ್ಯಕ್ಷ ಅನುರಾಗ್ ಸಿಂಗ್ಲಾ, ಸಂಘದ ಕಾರ್ಯದರ್ಶಿ ರಾಜೇಶ್ ಚಾಹವತ್, ಉಪಾಧ್ಯಕ್ಷರಾದ ನರೇಶ್ ಲಖನ್ ಪಾಲ್, ಕಿಶನ್ ಜೈನ್ ಉಪಸ್ಥಿತರಿದ್ದರು.

ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಚನ್ನಬಸಪ್ಪ ಆಂಡ್ ಸನ್ಸ್ ವ್ಯವಸ್ಥಾಪಕ ನಿರ್ದೇಶಕ ಬಿ.ಸಿ.ಶಿವಕುಮಾರ್, ದೇಶೀಯ ಜವಳಿ ಉದ್ಯಮ ವಲಯವನ್ನು ಪ್ರೋತ್ಸಾಹಿಸುವ ಅಗತ್ಯವಿದೆ. ದೇಶೀಯವಾಗಿ ಉತ್ಪಾದನೆಯಾಗುವ ಬೆಟ್ಟೆಗಳನ್ನು ಖರೀದಿಸುವ ಮನಸ್ಥಿತಿ ಬೆಳೆಯಬೇಕು. ದೇಶೀಯ ಬ್ರಾಂಡ್ ಗಳಿಂದ ಆರ್ಥಿಕಾಭಿವೃದ್ಧಿಗೆ ಹೆಚ್ಚಿನ ರೀತಿಯಲ್ಲಿ ನೆರವಾಗಲಿದೆ. ಹೀಗಾಗಿ ಭಾರತದ ಗಾರ್ಮೆಂಟ್ಸ್ ನಲ್ಲಿ ತಯಾರಿಕೆಯಾದ ಬಟ್ಟೆಗಳನ್ನು ಧರಿಸೋಣ ವಿದೇಶಿ ವ್ಯಾಮೋಹ ಬಿಡೋಣ. ಮತ್ತು ಸ್ಥಳೀಯರು ತಯಾರಿಸಿದ ಗಾರ್ಮೆಂಟ್ಸ್ ಬಟ್ಟೆಗಳನ್ನು ದೇಶದ ಜನ ಖರೀದಿಸಿದರೆ ಆರ್ಥಿಕವಾಗಿ ಭಾರತ ಸಧೃಢವಾಗುತ್ತದೆ ಜೊತೆಗೆ ಸ್ವಾವಲಂಬಿ ಭಾರತ ನಿರ್ಮಿಸಲು ನೆರವಾಗುತ್ತದೆ ಎಂದರು.

ಸೌತ್ ಇಂಡಿಯಾ ಗಾರ್ಮೆಂಟ್ ಉತ್ಪಾದಕರ ಸಂಘದ ಅಧ್ಯಕ್ಷ ಅನುರಾಗ್ ಸಿಂಗ್ಲಾ ಮಾತನಾಡಿ, ಇಡೀ ದೇಶದ ಜವಳಿ ವಲಯದಲ್ಲಿ ಕರ್ನಾಟಕ ಮಂಚೂಣಿಯಲ್ಲಿದ್ದು, ಬೆಂಗಳೂರು ಜವಳಿ ಉದ್ಯಮದ ಕೇಂದ್ರವಾಗಿದೆ. ಗಾರ್ಮೆಂಟ್ಸ್ ಉದ್ಯಮದಲ್ಲಿ ಬೆಂಗಳೂರಿಗೆ ಉತ್ತಮ ಭವಿಷ್ಯವಿದೆ.  ಕೃಷಿ ನಂತರ ಜವಳಿ ಉದ್ಯಮ ಅತಿ ಹೆಚ್ಚು ಉದ್ಯೋಗ ಕಲ್ಪಿಸಿದ್ದು, ವಿಶೇಷವಾಗಿ ಮಹಿಳೆಯರು ಈ ಕ್ಷೇತ್ರದಲ್ಲಿ ಉದ್ಯೋಗ ಪಡೆದು ಆರ್ಥಿಕ ಬೆಳವಣಿಗೆಗೆ ಬಹುದೊಡ್ಡ ಕೊಡುಗೆ ನೀಡುತ್ತಿದ್ದಾರೆ ಎಂದರು.

ಕೋವಿಡ್ ನಿಂದ ನೆಲಕಚ್ಚಿದ್ದ ಉದ್ಯಮ ಇದೀಗ ಶೇ 50 ರಷ್ಟು ಚೇತರಿಸಿಕೊಂಡಿದ್ದು, ಕೇಂದ್ರದ ಕಿರು, ಸಣ್ಣ ಮತ್ತು ಮಧ್ಯಮ ಉದ್ಯಮ ವಲಯ ಜವಳಿ ಕ್ಷೇತ್ರಕ್ಕೆ ಉತ್ತಮ ರೀತಿಯಲ್ಲಿ ನೆರವು ನೀಡುತ್ತಿದೆ. ಆದರೆ ಕೇಂದ್ರ ಸರ್ಕಾರ ಮೂರು ಸಾವಿರ ರೂಗಿಂತ ಹೆಚ್ಚಿನ ಬೆಲೆಯ ಉಡುಪುಗಳ ಮೇಲೆ ಶೇ 12 ರಷ್ಟು ಹಾಗೂ ಒಂದು ಸಾವಿರ ರೂಗಿಂತ ಕಡಿಮೆ ದರದ ಬಟ್ಟೆಗಳಿಗೆ ಶೇ 5 ರಷ್ಟು ಜಿ.ಎಸ್.ಟಿ ವಿಧಿಸಿದೆ. ಎಲ್ಲಾ ಬಟ್ಟೆಗಳ ಮೇಲೆ ಏಕರೂಪದಲ್ಲಿ ಶೇ 5 ರಷ್ಟು ಜಿ.ಎಸ್.ಟಿ. ವಿಧಿಸಬೇಕು ಎಂದು ಒತ್ತಾಯಿಸಿದರು.

ಯುವ ಉದ್ಯಮಿಗಳಿಗೆ ಮತ್ತು ಆನ್ಯ ರಾಜ್ಯದ ಗಾರ್ಮೆಂಟ್ಸ್ ಕಂಪನಿಗಳು ಬೆಂಗಳೂರು ನಗರದಲ್ಲಿ ಉದ್ಯಮ ಆರಂಭಿಸಲು ಮುಂದಾದರೆ ಸಂಘ ಸೂಕ್ತ ರೀತಿಯಲ್ಲಿ ಮಾರ್ಗದರ್ಶನ ನೀಡಲಿದೆ. ಪ್ರಧಾನಿ ನರೇಂದ್ರಮೋದಿ ಅವರು ಲೋಕಲ್ ಪಾರ್ ವೊಕಾಲ್ ಘೋಷಣೆ ಅಂದೋಲನ ಸ್ವರೂಪ ಪಡೆಯಬೇಕು. ಸ್ಥಳೀಯ ಸಣ್ಣ ಉದ್ಯಮಗಳನ್ನು ಬೆಂಬಲಿಸಬೇಕು ಎಂದರು.

Join Whatsapp
Exit mobile version