Home ಕ್ರೀಡೆ ಎರಡನೇ ಏಕದಿನ ಪಂದ್ಯದಲ್ಲೂ ಟೀಮ್ ಇಂಡಿಯಾಗೆ ಸೋಲು; ಟೆಸ್ಟ್ ಬಳಿಕ ಏಕದಿನ ಸರಣಿ ಗೆದ್ದ ಆಫ್ರಿಕಾ

ಎರಡನೇ ಏಕದಿನ ಪಂದ್ಯದಲ್ಲೂ ಟೀಮ್ ಇಂಡಿಯಾಗೆ ಸೋಲು; ಟೆಸ್ಟ್ ಬಳಿಕ ಏಕದಿನ ಸರಣಿ ಗೆದ್ದ ಆಫ್ರಿಕಾ

ಬೋಲ್ಯಾಂಡ್ ಪರ್ಲ್; ಸವಾಲಿನ ಮೊತ್ತ ಕಲೆಹಾಕಿದ್ದರೂ, ಬೌಲಿಂಗ್ ವಿಭಾಗದ ನೀರಸ ಪ್ರದರ್ಶನದಿಂದಾಗಿ ದಕ್ಷಿಣ ಆಫ್ರಿಕಾ ವಿರುದ್ಧದ ನಿರ್ಣಾಯಕ ಎರಡನೇ ಏಕದಿನ ಪಂದ್ಯದಲ್ಲೂ ಭಾರತ ಸೋತು ಸುಣ್ಣವಾಗಿದೆ. ಆ ಮೂಲಕ ಟೆಸ್ಟ್ ಸರಣಿಯ ಬಳಿಕ ಏಕದಿನ ಸರಣಿಯಲ್ಲೂ ಭಾರತ ಅತಿಥೇಯ ದಕ್ಷಿಣ ಆಫ್ರಿಕಾ ತಂಡಕ್ಕೆ ಶರಣಾಗಿದೆ.

ಬೊಲ್ಯಾಂಡ್ ಪರ್ಲ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟ್ ಮಾಡಿದ್ದ ಭಾರತ, ನಾಯಕ ಕೆಎಲ್ ರಾಹುಲ್ [55] ಹಾಗೂ ರಿಷಭ್ ಪಂತ್ [85] ಗಳಿಸಿದ ಅರ್ಧ ಶತಕಗಳ ನೆರವಿನಿಂದ ನಿಗದಿತ 50 ಓವರ್‌ಗಳಲ್ಲಿ 6 ವಿಕೆಟ್‌ ನಷ್ಟದಲ್ಲಿ 286 ರನ್ ಗಳಿಸಿತ್ತು.
ಸವಾಲಿನ ಮೊತ್ತವನ್ನು ಬೆನ್ನಟ್ಟುವ ವೇಳೆ ಭಾರತೀಯ ಬೌಲರ್’ಗಳು ಹರಿಣಗಳಿಗೆ ಸವಾಲಾಗಲೇ ಇಲ್ಲ.
ಆರಂಭಿಕರಾದ ಡೇವಿಡ್ ಮಲಾನ್ [91] ಹಾಗೂ ಕೀಪರ್ ಕ್ವಿಂಟನ್ ಡಿ ಕಾಕ್ [ 78], ಮೊದಲನೇ ವಿಕೆಟ್’ಗೆ 132 ರನ್’ಗಳ ಜೊತೆಯಾಟವಾಡಿ ತಂಡಕ್ಕೆ ಭದ್ರ ಬುನಾದಿ ಹಾಕಿಕೊಟ್ಟರು.
ಅಂತಿಮವಾಗಿ 48.1 ಓವರ್‌ಗಳಲ್ಲಿ ಕೇವಲ 3 ವಿಕೆಟ್ ನಷ್ಟದಲ್ಲಿ ಆಫ್ರಿಕಾ ಗುರಿ ತಲುಪಿ ಸರಣಿಯನ್ನು ತನ್ನದಾಗಿಸಿಕೊಂಡಿತು.
ಆಫ್ರಿಕಾ ಪರ ತಬ್ರೇಝ್ ಶಮ್ಸಿ 2 ವಿಕೆಟ್ ಪಡೆದರೆ, ಭಾರತದ ಪರ ಬುಮ್ರಾ, ಚಾಹಲ್ ಹಾಗೂ ಶಾರ್ದೂಲ್ ಠಾಕೂರ್ ತಲಾ 1 ವಿಕೆಟ್ ಪಡೆದರು.
ಸರಣಿಯ ಔಪಚಾರಿಕ ಅಂತಿಮ ಪಂದ್ಯ ನ್ಯೂಲ್ಯಾಂಡ್ಸ್ ಕ್ರಿಕೆಟ್ ಮೈದಾನದಲ್ಲಿ ಭಾನುವಾರ ನಡೆಯಲಿದೆ.

Join Whatsapp
Exit mobile version