Home ಟಾಪ್ ಸುದ್ದಿಗಳು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದಲ್ಲಿ ವಾಮಾಚಾರ

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದಲ್ಲಿ ವಾಮಾಚಾರ

ಮೈಸೂರು: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಸಂವಹನ ಹಾಗೂ ಪತ್ರಿಕೋದ್ಯಮ ಅಧ್ಯಯನ ವಿಭಾಗದಲ್ಲಿ ವಾಮಾಚಾರ ನಡೆದಿದ್ದು, ಈ ಸಂಬಂಧ ರಿಜಿಸ್ಟ್ರಾರ್ ಗೆ ದೂರು ನೀಡಲಾಗಿದೆ.


ಸಹಾಯಕ ಪ್ರಾಧ್ಯಾಪಕ ಡಾ.ತೇಜಸ್ವಿ ನವಿಲೂರು ತಮ್ಮ ಟೇಬಲ್‌ನ ಡ್ರಾಯರ್‌ ಎಳೆದಾಗ ಕೋಳಿ ತಲೆ, ಕಾಲು, ಕುಂಕುಮ, ಕೂದಲು, ಬಳೆ ಚೂರು ಜತೆಗೆ ಫೋಟೊ ಕತ್ತರಿಸಿರುವುದು ಕಂಡು ಬಂದಿದೆ.


ಇದನ್ನು ತೇಜಸ್ವಿ ಅವರು ವಿಶ್ವವಿದ್ಯಾಲಯದ ವಿಶೇಷಾಧಿಕಾರಿಯ ಗಮನಕ್ಕೆ ತಂದಿದ್ದು, ಪತ್ರಿಕೋದ್ಯಮ ಅಧ್ಯಯನ ವಿಭಾಗದ ಮುಖ್ಯಸ್ಥೆ ಹೇಮಲತಾ ರಿಜಿಸ್ಟ್ರಾರ್ ಗೆ ದೂರು ನೀಡಿದ್ದಾರೆ.


ತೇಜಸ್ವಿ ನವಿಲೂರು ಅವರು ಸಿದ್ಧಪಾಠ ತಯಾರಿ ವಿಳಂಬ ಮಾಡಿದ್ದರು ಎಂದು ವಿಶ್ವವಿದ್ಯಾಲಯ ಅಮಾನತು ಮಾಡಿತ್ತು. ಸಂಶೋಧನಾ ವಿದ್ಯಾರ್ಥಿಗಳ ಮನವಿ ಮೇರೆಗೆ ಅಮಾನತು ಆದೇಶ ಹಿಂಪಡೆದು ಕರ್ತವ್ಯಕ್ಕೆ ಹಾಜರಾದ ದಿನವೇ ಈ ಘಟನೆ ನಡೆದಿದೆ.


ವಾಮಾಚಾರ ಸಂಬಂಧ ವಿಭಾಗದ ಮುಖ್ಯಸ್ಥರು ರಿಜಿಸ್ಟ್ರಾರ್ ಗೆ ದೂರು ನೀಡಿದ್ದಾರೆ. ತನಿಖೆ ನಡೆಸಿ ಕ್ರಮ ಕೈಗೊಳ್ಳಲಾಗುವುದು ಎಂದು ಕುಲಪತಿ ಪ್ರೊ.ಎಸ್.ವಿದ್ಯಾಶಂಕರ್ ಪ್ರತಿಕ್ರಿಯಿಸಿದ್ದಾರೆ.

Join Whatsapp
Exit mobile version