Home ಟಾಪ್ ಸುದ್ದಿಗಳು ಸೂರ್ಯ ನಟನೆಯ ತಮಿಳುಚಿತ್ರ ‘ಸೂರರೈ ಪೊಟ್ಟ್ರು’ ಪ್ರತಿಷ್ಠಿತ ‘ಆಸ್ಕರ್ ಪ್ರಶಸ್ತಿ’ ಸ್ಪರ್ಧೆಗೆ ಪ್ರವೇಶ

ಸೂರ್ಯ ನಟನೆಯ ತಮಿಳುಚಿತ್ರ ‘ಸೂರರೈ ಪೊಟ್ಟ್ರು’ ಪ್ರತಿಷ್ಠಿತ ‘ಆಸ್ಕರ್ ಪ್ರಶಸ್ತಿ’ ಸ್ಪರ್ಧೆಗೆ ಪ್ರವೇಶ

ನವದೆಹಲಿ : ಜನಪ್ರಿಯ ನಟ ಸೂರ್ಯ ನಟನೆಯ ತಮಿಳು ಚಿತ್ರ ‘ಸೂರರೈ ಪೊಟ್ಟ್ರು’ ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿ ಸ್ಪರ್ಧೆಯಲ್ಲಿ ಗುರುತಿಸಿಕೊಂಡಿದೆ. ಸುಧಾ ಕೊಂಗರ ನಿರ್ದೇಶನದ ಈ ಚಿತ್ರ ಆಸ್ಕರ್ ಪ್ರಶಸ್ತಿಯ ಸಾಮಾನ್ಯ ವಿಭಾಗದ ಅತ್ಯುತ್ತಮ ನಟ, ಅತ್ಯುತ್ತಮ ನಟಿ, ಅತ್ಯುತ್ತಮ ನಿರ್ದೇಶಕ ಮತ್ತಿತರ ಹಲವು ವಿಭಾಗಗಳಲ್ಲಿ ಪೈಪೋಟಿ ನೀಡುತ್ತಿದೆ.

ಸೂರರೈ ಪೊಟ್ಟ್ರು ಸಿನೆಮಾ ಏರ್ ಡೆಕ್ಕನ್ ಏರ್ ಲೈನ್ಸ್ ಸಂಸ್ಥಾಪನೆ ಮಾಡಿದ ಕ್ಯಾಪ್ಟನ್ ಗೋಪಿನಾಥ್ ಜೀವನ ಕಥೆ ಆಧಾರಿತ ಸಿನೆಮಾವಾಗಿದೆ. ಸಿನೆಮಾ ಆಸ್ಕರ್ ಪ್ರಶಸ್ತಿ ಸ್ಪರ್ಧೆಗೆ ಆಯ್ಕೆಯಾಗಿರುವ ಬಗ್ಗೆ ನಿನ್ನೆ ಚಿತ್ರದ ಸಹ ನಿರ್ಮಾಪಕ ರಾಜಶೇಖರ್ ಪಾಂಡ್ಯನ್ ಟ್ವೀಟ್ ಮೂಲಕ ತಿಳಿಸಿದ್ದಾರೆ.

ಕಳೆದ ವರ್ಷ ಕೊರೊನ ವೈರಸ್ ಹಿನ್ನೆಲೆಯಲ್ಲಿ ಲಾಕ್ ಡೌನ್ ಬಳಿಕ, ಒಟಿಟಿ ಮೂಲಕ ಬಿಡುಗಡೆಯಾದ ಮೊದಲ ತಮಿಳು ಸಿನೆಮಾ ಇದಾಗಿದೆ. ಲಾಕ್ ಡೌನ್ ಹಿನ್ನೆಲೆಯಲ್ಲಿ, ಸಿನೆಮಾ ಮಂದಿರಗಳಲ್ಲಿ ಬಿಡುಗಡೆಗೊಳಿಸಲು ಸಾಧ್ಯವಾಗದೆ, ಆನ್ ಲೈನ್ ನಲ್ಲೇ ಬಿಡುಗಡೆಗೊಂಡ ಚಿತ್ರಗಳನ್ನೂ ಈ ಬಾರಿ ಆಸ್ಕರ್ ಪ್ರಶಸ್ತಿ ಸಂಘಟಕರು ಪ್ರಶಸ್ತಿಗೆ ಪರಿಗಣಿಸಿದ್ದಾರೆ. ಸಿನೆಮಾದಲ್ಲಿ ಅಪರ್ಣಾ ಬಾಲಮುರಳಿ ಮತ್ತು ಪರೇಶ್ ರಾವಲ್ ಮತ್ತಿತರರು ನಟಿಸಿದ್ದಾರೆ.  

Soorarai Pottru - Official Trailer | Suriya, Aparna | Sudha Kongara|GV Prakash|Amazon Original Movie
Join Whatsapp
Exit mobile version