Home ಟಾಪ್ ಸುದ್ದಿಗಳು ರಷ್ಯಾದ ಸೇನೆಯಿಂದ ಭಾರತೀಯ ಪ್ರಜೆಗಳು ಶೀಘ್ರ ಬಿಡುಗಡೆ: ವಿದೇಶಾಂಗ ಸಚಿವಾಲಯ

ರಷ್ಯಾದ ಸೇನೆಯಿಂದ ಭಾರತೀಯ ಪ್ರಜೆಗಳು ಶೀಘ್ರ ಬಿಡುಗಡೆ: ವಿದೇಶಾಂಗ ಸಚಿವಾಲಯ

ನವದೆಹಲಿ: ರಷ್ಯಾದ ಸೇನೆಯಿಂದ ಬಿಡುಗಡೆಯಾಗಲು ಬಯಸಿರುವ ಕನಿಷ್ಠ 50 ಭಾರತೀಯ ಪ್ರಜೆಗಳೊಂದಿಗೆ ಸಂಪರ್ಕದಲ್ಲಿರುವುದಾಗಿ ತಿಳಿಸಿದ ವಿದೇಶಾಂಗ ವ್ಯವಹಾರಗಳ ಸಚಿವಾಲಯ, ಅವರು ಶೀಘ್ರದಲ್ಲೇ ಹಿಂತಿರುಗುತ್ತಾರೆ ಎಂಬ ವಿಶ್ವಾಸವಿದೆ ಎಂದು ತಿಳಿಸಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್, ಪ್ರಧಾನಿ ಮೋದಿ ಅವರು ಇತ್ತೀಚಿನ ರಷ್ಯಾ ಭೇಟಿಯ ಸಂದರ್ಭದಲ್ಲಿ ರಷ್ಯಾ ಅಧ್ಯಕ್ಷ ಪುಟಿನ್ ಅವರೊಂದಿಗೆ ಈ ವಿಷಯವನ್ನು ಪ್ರಸ್ತಾಪಿಸಿದ್ದರು.ನಮ್ಮ ಮನವಿಗೆ ರಷ್ಯಾದ ಕಡೆಯಿಂದ ಸಕಾರಾತ್ಮಕ ಪ್ರತಿಕ್ರಿಯೆ ಬಂದಿದೆ. ಉಭಯ ದೇಶಗಳು ಭಾರತೀಯ ಪ್ರಜೆಗಳನ್ನು ಶೀಘ್ರವಾಗಿ ಬಿಡುಗಡೆ ಮಾಡಲು ಶ್ರಮಿಸುತ್ತಿದ್ದಾರೆ ಮತ್ತು ಅವರು ಶೀಘ್ರದಲ್ಲೇ ಹಿಂತಿರುಗುತ್ತಾರೆ ಎಂಬ ವಿಶ್ವಾಸವಿದೆ ಎಂದು ತಿಳಿಸಿದರು.

Join Whatsapp
Exit mobile version