Home ಟಾಪ್ ಸುದ್ದಿಗಳು “ಹೋರಾಟ ಮುಂದುವರಿಯಲಿದೆ”: 21 ದಿನಗಳ ಉಪವಾಸ ಅಂತ್ಯಗೊಳಿಸಿದ ಸೋನಮ್ ವಾಂಗ್ ಚುಕ್

“ಹೋರಾಟ ಮುಂದುವರಿಯಲಿದೆ”: 21 ದಿನಗಳ ಉಪವಾಸ ಅಂತ್ಯಗೊಳಿಸಿದ ಸೋನಮ್ ವಾಂಗ್ ಚುಕ್

ಶ್ರೀನಗರ: ಖ್ಯಾತ ಹವಾಮಾನ ಕಾರ್ಯಕರ್ತ ಸೋನಮ್ ವಾಂಗ್ ಚುಕ್ ಅವರು ಲಡಾಖ್ ಗೆ ರಾಜ್ಯ ಸ್ಥಾನಮಾನ ಮತ್ತು ದುರ್ಬಲವಾದ ಹಿಮಾಲಯನ್ ಪರಿಸರವನ್ನು ರಕ್ಷಿಸಲು ಒತ್ತಾಯಿಸಿ ಕಳೆದ 21ದಿನಗಳಿಂದ ನಡೆಸುತ್ತಿದ್ದ ತಮ್ಮ ಉಪವಾಸ ಸತ್ಯಾಗ್ರಹವನ್ನುಕೊನೆಗೊಳಿಸಿದ್ದಾರೆ.


ಉಪ್ಪು ಮತ್ತು ನೀರು ಮಾತ್ರ ಸೇವಿಸಿ ವಾಂಗ್ ಚುಕ್ ಇಲ್ಲಿವರೆಗೆ ಪ್ರತಿಭಟನೆ ನಿರತರಾಗಿದ್ದರು. ಮಂಗಳವಾರ ಉಪವಾಸ ಸತ್ಯಾಗ್ರಹ ಕೈ ಬಿಟ್ಟ ಅವರು ತಮ್ಮ ಹೋರಾಟ ಮುಂದುವರಿಯುತ್ತದೆ ಎಂದಿದ್ದಾರೆ.


“ಲಡಾಖ್ ಗೆ ಸಾಂವಿಧಾನಿಕ ರಕ್ಷಣೆ ಮತ್ತು ಜನರ ರಾಜಕೀಯ ಹಕ್ಕುಗಳಿಗಾಗಿ ನಾನು ಹೋರಾಟವನ್ನು ಮುಂದುವರಿಸುತ್ತೇನೆ” ಎಂದು ಹೇಳಿ ವಾಂಗ್ ಚುಕ್ ಅವರು ಉಪವಾಸ ಸತ್ಯಾಗ್ರಹವನ್ನು ಅಂತ್ಯಗೊಳಿಸಿದ್ದಾರೆ. ಉಪವಾಸ ಅಂತ್ಯಗೊಳ್ಳುತ್ತಿದ್ದಂತೆ ಕೇಂದ್ರಾಡಳಿತ ಪ್ರದೇಶದ ವಿವಿಧ ಭಾಗಗಳಲ್ಲಿ ಸಾವಿರಾರು ಜನರು ಜಮಾಯಿಸಿದ್ದು, ಇದೀಗ ಅದೇ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಉಪವಾಸ ಸತ್ಯಾಗ್ರಹ ಆರಂಭಿಸುವುದಾಗಿ ಮಹಿಳಾ ಸಂಘಟನೆಗಳು ಹೇಳಿವೆ.

Join Whatsapp
Exit mobile version