Home ಟಾಪ್ ಸುದ್ದಿಗಳು ಸೋನಾಲಿ ಫೋಗಟ್ ಸಾವು: ತನಿಖೆಯನ್ನು ಸಿಬಿಐಗೆ ಒಪ್ಪಿಸಿದ ಗೋವಾ ಸರ್ಕಾರ

ಸೋನಾಲಿ ಫೋಗಟ್ ಸಾವು: ತನಿಖೆಯನ್ನು ಸಿಬಿಐಗೆ ಒಪ್ಪಿಸಿದ ಗೋವಾ ಸರ್ಕಾರ

ಪಣಜಿ: ಹರಿಯಾಣ ಬಿಜೆಪಿ ನಾಯಕಿ ಮತ್ತು ನಟಿ ಸೋನಾಲಿ ಫೋಗಟ್ ಅವರ ಸಾವಿನ ತನಿಖೆಯನ್ನು ಸಿಬಿಐಗೆ ಹಸ್ತಾಂತರಿಸಲು ಸರ್ಕಾರ ನಿರ್ಧರಿಸಿದೆ ಎಂದು ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಸೋಮವಾರ ಹೇಳಿದ್ದಾರೆ.

ಸೋನಾಲಿ ಫೋಗಟ್ ಪ್ರಕರಣದಲ್ಲಿ ಸಿಬಿಐ ತನಿಖೆ ನಡೆಯಬೇಕು ಎಂದು ಜನರು ನಿರಂತರವಾಗಿ ಒತ್ತಾಯಿಸುತ್ತಿದ್ದಾರೆ. ಅವರ ಮಗಳು ಕೂಡ ಈ ಬೇಡಿಕೆಯನ್ನು ಇಟ್ಟಿದ್ದಳು. ನಮ್ಮ ಪೊಲೀಸರ ಮೇಲೆ ನಮಗೆ ಸಂಪೂರ್ಣ ನಂಬಿಕೆ ಇದೆ ಮತ್ತು ಅವರು ಪ್ರಕರಣದ ಬಗ್ಗೆ ಚೆನ್ನಾಗಿ ತನಿಖೆ ನಡೆಸುತ್ತಿದ್ದಾರೆ. ಅವರು ಉತ್ತಮ ಸುಳಿವುಗಳನ್ನು ಸಹ ಕಂಡುಕೊಂಡಿದ್ದಾರೆ. ಆದರೆ ಜನರ ಮತ್ತು ಅವರ ಮಗಳ ನಿರಂತರ ಬೇಡಿಕೆಯನ್ನು ಗಮನದಲ್ಲಿಟ್ಟುಕೊಂಡು, ಇಂದು ನಾವು ಪ್ರಕರಣವನ್ನು ಸಿಬಿಐಗೆ ಹಸ್ತಾಂತರಿಸುತ್ತಿದ್ದೇವೆ. ಈ ಪ್ರಕರಣವನ್ನು ಸಿಬಿಐಗೆ ಒಪ್ಪಿಸುವಂತೆ ಕೇಂದ್ರ ಗೃಹ ಸಚಿವರಿಗೆ ನಾನೇ ಪತ್ರ ಬರೆಯುತ್ತೇನೆ ಎಂದು ಸಾವಂತ್ ಹೇಳಿದ್ದಾರೆ.

Join Whatsapp
Exit mobile version