Home ಟಾಪ್ ಸುದ್ದಿಗಳು ಮದ್ಯ ಸೇವನೆಗೆ ಹಣ ನೀಡದ ತಾಯಿಯನ್ನೇ ಕೊಂದ ಮಗ!

ಮದ್ಯ ಸೇವನೆಗೆ ಹಣ ನೀಡದ ತಾಯಿಯನ್ನೇ ಕೊಂದ ಮಗ!

ಬೆಂಗಳೂರು: ಕುಡಿಯಲು ಹಣ ನೀಡದ್ದಕ್ಕೆ ಹೆತ್ತ ತಾಯಿಯ ಕೆನ್ನೆಗೆ ಬಲವಾಗಿ ಹೊಡೆದು ಪಾಪಿ ಮಗ ಕೊಲೆಗೈದಿರುವ ದಾರುಣ ಘಟನೆ ಮಾರತ್ ಹಳ್ಳಿಯ ದೇವರ ಬಿಸನಹಳ್ಳಿಯಲ್ಲಿ ನಡೆದಿದೆ.

ದೇವರ ಬಿಸನಹಳ್ಳಿಯ ಯಮುನಮ್ಮ (70) ಕೊಲೆಯಾದ ದುರ್ದೈವಿ. ಕೃತ್ಯ ನಡೆಸಿದ  ಎಂದು ಪುತ್ರ ಅಂಬರೀಶ್ ನನ್ನು ಬಂಧಿಸಿ ಮುಂದಿನ ತನಿಖೆಯನ್ನು ಕೈಗೊಳ್ಳಲಾಗಿದೆ ಎಂದು ಡಿಸಿಪಿ ಎಸ್ .ಗಿರೀಶ್ ಅವರು ತಿಳಿಸಿದ್ದಾರೆ. ಮದ್ಯವ್ಯಸನಾಗಿದ್ದ ಅಂಬರೀಶ್ ಮದ್ಯ ಸೇವಿಸಲು ಹಣ ನೀಡುವಂತೆ ತಾಯಿ ಯಮುನಮ್ಮ ಅವರನ್ನು ಪೀಡಿಸಿದ್ದಾನೆ.

ಅವರು ಹಣ ನೀಡಲು ನಿರಾಕರಿಸಿದ ಯಮುನಮ್ಮ ಹಾಗೂ ಅಂಬರೀಶ್ ಮಧ್ಯೆ ವಾಗ್ವಾದ ನಡೆದಿದೆ. ಈ ವೇಳೆ ಕೋಪಗೊಂಡ ಅಂಬರೀಶ್ ಯಮುನಮ್ಮ ಅವರ ಕೆನ್ನೆಗೆ ಜೋರಾಗಿ ಹೊಡೆದಿದ್ದಾನೆ.

ತೀವ್ರ ಸ್ವರೂಪದ ಏಟು ಬಿದ್ದ ಕಾರಣ ಸ್ಥಳದಲ್ಲೇ ತಾಯಿ ಯಮುನಮ್ಮ ಕುಸಿದು ಬಿದ್ದು, ಸಾವನ್ನಪ್ಪಿದ್ದಾರೆ.ಸುದ್ದಿ ತಿಳಿದ ತಕ್ಷಣವೇ ಸ್ಥಳಕ್ಕೆ ಧಾವಿಸಿದ ಮಾರತ್ತಹಳ್ಳಿ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿ ಆರೋಪಿಯನ್ನು ಬಂಧಿಸಿದ್ದಾರೆ

Join Whatsapp
Exit mobile version