ಮುರುಘಾ ಶ್ರೀಯ ಎರಡನೇ ಪೋಕ್ಸೋ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನ ವಾರೆಂಟ್‌ಗೆ ಮನವಿ

Prasthutha|

ಚಿತ್ರದುರ್ಗ: ಪೋಕ್ಸೊ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದು, ಬಿಡುಗಡೆಯಾದ ಮುರುಘಾ ಶರಣರನ್ನು ಮತ್ತೆ ಬಂಧಿಸಲು ಮನವಿ ಸಲ್ಲಿಸಲಾಗಿದೆ. ಶ್ರೀ ವಿರುದ್ಧದ ಎರಡನೇ ಪೋಕ್ಸೋ ಪ್ರಕರಣಕ್ಕೆ ಸಂಬಂಧಸಿದಂತೆ ಎರಡನೇ ಪೋಕ್ಸೋ ಪ್ರಕರಣ ವಿಚಾರಣೆ ಚಿತ್ರದುರ್ಗದ ಎರಡನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದ್ದು, ವಿ ಸಿ ಮೂಲಕ ವಿಚಾರಣೆಗೆ ಹಾಜರಾಗಿರುವ ಎ2 ಆರೋಪಿ ವಾರ್ಡನ್ ರಶ್ಮಿ ಹಾಗು ಎ1 ಆರೋಪಿ ಚಿತ್ರದುರ್ಗದ ಮುರುಘಾಶ್ರೀ ಗೈರು ಹಾಜರಾಗಿದ್ದಾರೆ ಎಂದು ಹೇಳಲಾ ಗುತ್ತಿದೆ.

- Advertisement -

ಎರಡನೇ ಪೋಕ್ಸೋ ಪ್ರಕರಣದಲ್ಲಿ ಮುರುಘಾಶ್ರೀ ಬಾಡಿ ವಾರೆಂಟ್ ಹಿನ್ನೆಲೆ ಬಂಧನ ವಾರೆಂಟ್ ನೀಡಲು ಸರ್ಕಾರಿ ವಕೀಲ ಜಗದೀಶ್ ಮನವಿ ಸಲ್ಲಿಸಿದ್ದಾರೆ.

ಅದರೆ ಸರ್ಕಾರಿ ವಕೀಲರ ವಾದಕ್ಕೆ ಮರುಘಾ ಶ್ರೀ ಪರ ವಕೀಲ ವಿಶ್ವನಾಥಯ್ಯ ಆಕ್ಷೇಪ ವ್ಯಕ್ತಪಡಿಸಿದ್ದು, ತಕರಾರು ಅರ್ಜಿ ಸಲ್ಲಿಸುವುದಕ್ಕೆ ಸಮಯಾವಕಾಶಕ್ಕೆ ಎರಡು ದಿನ ಕೇಳಿ ಮನವಿ ಮಾಡಿದ್ದಾರೆ‌. ಬರವಣಿಗೆಯಲ್ಲಿ ಮನವಿ ಸಲ್ಲಿಕೆಗೆ ನ್ಯಾಯಾಲಯ ಸಮಯ ನೀಡಿದೆ. ಸರ್ಕಾರಿ ವಕೀಲರುಗೂ ಕೋರ್ಟ್ ಸಮಯ ನೀಡಿದೆ. ವಕೀಲರ ಮನವಿಯನ್ನು ಆಲಿಸಿ ನ್ಯಾಯಾಲಯ ತೀರ್ಮಾನ ಕೈಗೊಳ್ಳಲಿದೆ.



Join Whatsapp