Home ಟಾಪ್ ಸುದ್ದಿಗಳು ಕುಡಿಯಲು ಹಣ ನೀಡದ್ದಕ್ಕೆ ಮನಬಂದಂತೆ ಥಳಿಸಿ ತಾಯಿಯನ್ನೇ ಕೊಂದ ಮಗ

ಕುಡಿಯಲು ಹಣ ನೀಡದ್ದಕ್ಕೆ ಮನಬಂದಂತೆ ಥಳಿಸಿ ತಾಯಿಯನ್ನೇ ಕೊಂದ ಮಗ

ಹಾಸನ: ಕುಡಿಯಲು ಹಣ ನೀಡದ ಕಾರಣಕ್ಕೆ ಮನಬಂದಂತೆ ಥಳಿಸಿ ತಾಯಿಯನ್ನೇ ಮಗ ಕೊಂದಿರುವ ಘಟನೆ ಹಾಸನ ಜಿಲ್ಲೆ, ಅರಕಲಗೂಡು ತಾಲ್ಲೂಕಿನ, ಮಧುರನಹಳ್ಳಿ ಗ್ರಾಮದಲ್ಲಿ ನಡೆದಿದೆ.

ಚಿಕ್ಕಮ್ಮ (61) ಪುತ್ರನಿಂದಲೇ ಕೊಲೆಯಾದ ದುರ್ದೈವಿ ತಾಯಿ. ಭರತ್ (26) ತಾಯಿಯನ್ನು ಕೊಂದ ಮಗ

ಕುಡಿತದ ದಾಸನಾಗಿದ್ದ ಭರತ್ ಪೈಂಟ್ ಕೆಲಸ ಮಾಡುತ್ತಿದ್ದ. ಈತ ಅ.29ರಂದು ಕಂಠಪೂರ್ತಿ ಕುಡಿದು ಮನೆಗೆ ಬಂದಿದ್ದು, ತಾಯಿ ಚಿಕ್ಕಮ್ಮ ಬಳಿ ಕುಡಿಯಲು ಹಣ ನೀಡುವಂತೆ ಒತ್ತಾಯಿಸಿದ್ದನು. ಹಣ ನೀಡಲು ನಿರಾಕರಿಸಿದ ಕಾರಣಕ್ಕೆ ಭರತ್ ಕೋಪಗೊಂಡು ಚಿಕ್ಕಮ್ಮನಿಗೆ ದೊಣ್ಣೆಯಿಂದ ಹೊಡೆದು, ತಲೆಯನ್ನು ಗೋಡೆಗೆ ಬಡಿದು ಪರಾರಿಯಾಗಿದ್ದಾನೆ. ಹಲ್ಲೆಗೊಳಗಾಗಿ ಚಿಕ್ಕಮ್ಮ ಕುಸಿದು ಬಿದ್ದಿರುವುದನ್ನು ಗ್ರಾಮಸ್ಥರು ಕಂಡು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ (Mysuru) ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಚಿಕ್ಕಮ್ಮ ಸಾವನ್ನಪ್ಪಿದ್ದಾರೆ.

Join Whatsapp
Exit mobile version