ಸೋಮವಾರಪೇಟೆ| ಬೈಕ್, ಸ್ಕೂಟರ್ ಮುಖಾಮುಖಿ; ಯೋಧನಿಗೆ ಗಂಭೀರ ಗಾಯ

Prasthutha|

ಮಡಿಕೇರಿ: ಬಜಾಜ್ ಪ್ಲಾಟಿನ ಬೈಕ್ ಮತ್ತು ಸ್ಕೂಟರ್ ನಡುವೆ  ಮುಖಾಮುಖಿ ಡಿಕ್ಕಿ ಸಂಭವಿಸಿ ಯೋಧನೊಬ್ಬ ಗಂಭೀರ ಗಾಯಗೊಂಡಿರುವ ಘಟನೆ ಸೋಮವಾರಪೇಟೆ ಸಮೀಪದ ನಗರೂರು ಬಳಿ ಮಾಂಡವಿ ಮೋಟರ್ಸ್ ಮುಂಭಾಗದಲ್ಲಿ ನಡೆದಿದೆ.

- Advertisement -

ಐಗೂರು ನಿವಾಸಿ ಸಿ.ಆರ್.ಪಿ.ಎಫ್. ಯೋಧ ಡಾಲು ಅವರ ತಲೆಯ ಭಾಗಕ್ಕೆ ತೀವ್ರ ಪೆಟ್ಟಾಗಿದ್ದು ಚಿಂತಾಜನಕ ಸ್ಥಿತಿಯಲ್ಲಿದ್ದ ಇವರನ್ನು ಮೈಸೂರಿನ ಜೆ.ಎಸ್.ಎಸ್. ಆಸ್ಪತ್ರೆಗೆ ದಾಖಲಿಸಲಾಗಿದೆ.

ಕಾಗಡಿ ಕಟ್ಟೆ,ಅಯ್ಯಪ್ಪ ಕಾಲೋನಿ ನಿವಾಸಿ ಮನೋಜ್ ಹಾಗೂ ಆಸಿಫ್. ಎಂಬವರಿಗೆ ಮಡಿಕೇರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸೋಮವಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

Join Whatsapp