Home ಟಾಪ್ ಸುದ್ದಿಗಳು ಕೆಲ ಕೋರ್ಟ್ ಗಳು ಬಿಜೆಪಿ ಹೇಳಿದಂತೆ ಕೇಳುತ್ತಿವೆ: ಯತೀಂದ್ರ ಸಿದ್ದರಾಮಯ್ಯ

ಕೆಲ ಕೋರ್ಟ್ ಗಳು ಬಿಜೆಪಿ ಹೇಳಿದಂತೆ ಕೇಳುತ್ತಿವೆ: ಯತೀಂದ್ರ ಸಿದ್ದರಾಮಯ್ಯ

ಮೈಸೂರು: ಕೆಲ ನ್ಯಾಯಾಲಯಗಳು ಕೇಂದ್ರ ಬಿಜೆಪಿ ಸರ್ಕಾರ ಹೇಳಿದಂತೆ ಕೇಳುತ್ತಿವೆ ಎಂದು ಸಿಎಂ ಪುತ್ರ, ಪರಿಷತ್ ಸದಸ್ಯ ಯತೀಂದ್ರ ಸಿದ್ದರಾಮಯ್ಯ ಆರೋಪ ಮಾಡಿದ್ದಾರೆ.


ಎಚ್.ಡಿ. ಕೋಟೆಯಲ್ಲಿ ಆಯೋಜನೆಗೊಂಡಿದ್ದ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಮಗೆ ತನಿಖೆ ಬಗ್ಗೆ ಭಯ ಇಲ್ಲ. ನಾವು ಯಾವುದೇ ತಪ್ಪು ಮಾಡಿಲ್ಲ. ತನಿಖಾ ಸಂಸ್ಥೆಗಳನ್ನ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಕೆಲ ಕೋರ್ಟ್ಗಳು ಕೂಡ ಕೇಂದ್ರ ಬಿಜೆಪಿ (BJP) ಹೇಳುವಂತೆ ಕೇಳುತ್ತಿವೆ ಎಂದು ದೂರಿದರು.


ಸಿದ್ದರಾಮಯ್ಯ ಮೇಲೆ ಸುಳ್ಳು ಆರೋಪದ ಮಾಡಿ ಅವರನ್ನು ಪ್ರಕರಣಗಳಲ್ಲಿ ಸಿಲುಕಿಸಬೇಕು ಎನ್ನುವ ಪ್ರಯತ್ನ ಮಾಡುತ್ತಿದ್ದಾರೆ. ಪ್ರಶ್ನೆ ಮಾಡದೇ ಇದ್ದರೆ ಅವರು ಆಡಿದ್ದೇ ಆಟ ಆಗುತ್ತದೆ. ಕೇಂದ್ರ ಸರ್ಕಾರದ ಧೋರಣೆಗೆ ಜನ ಮನ್ನಣೆ ನೀಡಬಾರದು. ಬಡವರ ಪರ ಇರುವ ನಮ್ಮ ನಾಯಕರ ಪರ ನಿಮ್ಮ ಬೆಂಬಲ ಇರಬೇಕು ಎಂದು ವಿನಂತಿ ಮಾಡಿದರು.

Join Whatsapp
Exit mobile version