ಸೋಮವಾರಪೇಟೆ ಪಟ್ಟಣ ಪಂಚಾಯತ್ ಅಧ್ಯಕ್ಷೆ ನಳಿನಿ ಗಣೇಶ್ ಕೊರೋನಾಗೆ ಬಲಿ

Prasthutha|

ಸೋಮವಾರಪೇಟೆ ಪಟ್ಟಣ ಪಂಚಾಯತ್ ಅಧ್ಯಕ್ಷೆಯಾಗಿದ್ದ ನಳಿನಿ ಗಣೇಶ್ ಅವರು ಕೋವಿಡ್ ಸೋಂಕಿಗೆ ಒಳಗಾಗಿ ಮೃತಪಟ್ಟಿದ್ದಾರೆ. 2020ರ ನವೆಂಬರ್‌ನಲ್ಲಿ ಪಟ್ಟಣ ಪಂಚಾಯತ್ ಅಧ್ಯಕ್ಷೆಯಾಗಿ ನಳಿನಿ ಅವರು ಆಯ್ಕೆಯಾಗಿದ್ದರು. ತೀವ್ರ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ನಳಿನಿ ಅವರನ್ನು ಮಡಿಕೇರಿಯ ಜಿಲ್ಲಾ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

- Advertisement -

ಅವರು ಸೋಮವಾರ ಪೇಟೆ ತಾಲೂಕು  ಜಾನಪದ ಪರಿಷತ್  ನ ನಿರ್ದೇಶಕಿ ಕೂಡ ಆಗಿ ಕಾರ್ಯ ನಿರ್ವಹಿಸಿದ್ದರು. ಉತ್ತಮ ಗಾಯಕಿ ಕೂಡಾ ಆಗಿದ್ದ ನಳಿನಿ ಅವರು ಜನಾನುರಾಗಿಯಾಗಿದ್ದರು ಎನ್ನಲಾಗಿದೆ.

1990 ರಲ್ಲಿ ನಳಿನಿ ಅವರು ಮೊದಲ ಬಾರಿ ಗೆ ಸೋಮವಾರಪೇಟೆ ಪಂಚಾಯತ್ ಸದಸ್ಯೆಯಾಗಿ ಆಯ್ಕೆಯಾಗಿದ್ದರು. 1996, 2001, 2007, 2020 ರಲ್ಲಿಯೂ ಪಂಚಾಯತ್ ಸದಸ್ಯೆಯಾಗಿ ಮರು ಆಯ್ಕೆಗೊಂಡಿದ್ದರು. 1996 ರಲ್ಲಿ ಉಪಾಧ್ಯಕ್ಷೆಯಾಗಿ ಮೊದಲ ಬಾರಿಗೆ ಆಯ್ಕೆಗೊಂಡರೆ, 2007 ಮತ್ತು 2020 ರಲ್ಲಿ ಅಧ್ಯಕ್ಷೆಯಾಗಿ ಆಯ್ಕೆಗೊಂಡಿದ್ದರು. ಹೀಗೆ ನಳಿನಿ ಅವರು 2 ಬಾರಿ ಸೋಮವಾರಪೇಟೆ ಪಂಚಾಯತ್ ಗೆ ಅಧ್ಯಕ್ಷೆ ಮತ್ತು 1 ಬಾರಿ ಉಪಾಧ್ಯಕ್ಷೆಯಾದ ಹಿರಿಮೆ ಹೊಂದಿದ್ದರು.

Join Whatsapp