ಬ್ರ್ಯಾಂಡ್ ಬೆಂಗಳೂರು ಜಾರಿಗೂ ಮೊದಲು ಮೂಲಭೂತ ಸಮಸ್ಯೆಗಳನ್ನು ಪರಿಹರಿಸಿ: ಅಪ್ಸರ್ ಕೊಡ್ಲಿಪೇಟೆ ಆಗ್ರಹ

Prasthutha|

ಬೆಂಗಳೂರು:  ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಬೆಂಗಳೂರು ದಕ್ಷಿಣ ಜಿಲ್ಲೆಯ 2024-27 ಅವಧಿಗೆ ನಡೆದ ಆಂತರಿಕ ಚುನಾವಣೆಯಲ್ಲಿ ನೂತನವಾಗಿ ಆಯ್ಕೆಯಾಗಿರುವ ಬ್ರಾಂಚ್ ಪದಾಧಿಕಾರಿಗಳು ಮತ್ತು ವಿಧಾನಸಭಾ ಕ್ಷೇತ್ರ ಸಮಿತಿಗಳ ನಾಯಕರುಗಳ ಸಭೆ ಜಿಲ್ಲಾಧ್ಯಕ್ಷರಾದ ಸೈಯದ್ ಮಹಬೂಬ್ ರವರ ಅಧ್ಯಕ್ಷತೆಯಲ್ಲಿ ನಡೆಯಿತು. 

- Advertisement -

 ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಎಸ್ಡಿಪಿಐ ರಾಜ್ಯ ಪ್ರಧಾನ ಕಾರ್ಯದರ್ಶಿ ಅಫ್ಸರ್ ಕೊಡ್ಲಿಪೇಟೆ ಪ್ರಸ್ತುತ ಸನ್ನಿವೇಶದಲ್ಲಿ ಪರ್ಯಾಯ ರಾಜಕಾರಣದ (Alternative politics) ಅಗತ್ಯತೆ ಬಗ್ಗೆ ನಾಯಕರುಗಳನ್ನುದ್ದೇಶಿಸಿ ಮಾತನಾಡಿದರು.

ಮುಂದುವರಿದು ಮಾತನಾಡಿದ ಅವರು ಸದ್ಯ ನಗರದಲ್ಲಿ ಅನಿಯಮಿತ ಕಸ ತೆರವು, ಅನೇಕ ಪ್ರದೇಶಗಳಲ್ಲಿ ನೀರಿನ ಕೊರತೆ ಇದೆ. ಮಳೆ ನೀರು ಚರಂಡಿಗಳಿಗೆ ಸರಾಗವಾಗಿ ಹೋಗದೆ ಸಮಸ್ಯೆ ಆಗುತ್ತಿದೆ. ಕಟ್ಟಡಗಳ ಬೈಲಾ ಉಲ್ಲಂಘನೆ, ಅಕ್ರಮ ಪಾರ್ಕಿಂಗ್, ಪಾದಾಚಾರಿ ಮಾರ್ಗ (ಫುಟ್‌ಪಾತ್) ಒತ್ತುವರಿ ಆಗಿವೆ.

- Advertisement -

ಹಾಲಿ ಬೀದಿ ದೀಪಗಳಲ್ಲಿ ಸಮಸ್ಯೆ, ಕಳಪೆ ಗುಣಮಟ್ಟದ ಸಾರ್ವಜನಿಕ ಕೆಲಸಗಳು, ಕೆರೆ ನೀರಿನಲ್ಲಿ ಮಾಲಿನ್ಯ, ಸಮಸ್ಯೆ ಕಡೆಗಣಿಸುವ ಅಧಿಕಾರಿಗಳು ಸೇರಿದಂತೆ ನಗರದಲ್ಲಿ ಸಾಕಷ್ಟು ಸಮಸ್ಯೆಗಳು ಅಸ್ತಿತ್ವದಲ್ಲಿದೆ. ಇದೆಲ್ಲದರ ಮೇಲ್ವಿಚಾರಣೆ ಮಾಡುವ ಬಿಬಿಎಂಪಿಗೆ ಕೌನ್ಸಿಲ್‌ ಚುನಾವಣೆಯೇ ನಡೆಯದೇ ವರ್ಷಗಳು ಉರಳಿವೆ ಮೂಲಭೂತ ಸಮಸ್ಯೆಗಳ ಪರಿಹಾರಕ್ಕೆ ಕ್ರಮ ವಹಿಸಬೇಕೆಂದು ಅವರು ಆಗ್ರಹಿಸಿದರು.

ರಾಜ್ಯ ಕಾರ್ಯದರ್ಶಿಗಳಾದ ಅಬ್ದುಲ್ ರಹೀಂ ಪಟೇಲ್ ರವರು ಪರಿಣಾಮಕಾರಿ ನಾಯಕತ್ವದ ಬಗ್ಗೆ ತರಬೇತಿ ನೀಡಿದರು.

ಈ ಸಭೆಯಲ್ಲಿ ರಾಜ್ಯ ಕಾರ್ಯದರ್ಶಿ ಬಿಬಿಎಂಪಿಯ ಮಾಜಿ ಕಾರ್ಪೊರೇಟರ್ ಹಾಗೂ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಮುಜಾಹಿದ್ ಪಾಶ ರಾಜ್ಯ ಸಮಿತಿ ಸದಸ್ಯೆ ಫ್ರೊಫೆಸರ್ ನಾಝನೀನ್ ಬೇಗಂ ಜಿಲ್ಲಾ  ಉಪಾಧ್ಯಕ್ಷರಾದ ಫಯಾಜ್ ಅಹ್ಮದ್, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಖಾಜಾ ಮೊಯಿನುದ್ದೀನ್, ಸಲೀಂ ಅಹ್ಮದ್ ಮತ್ತು ಜಿಲ್ಲಾ ನಾಯಕರುಗಳು ಉಪಸ್ಥಿತರಿದ್ದರು.



Join Whatsapp
Exit mobile version