Home ಕರಾವಳಿ ಮಂಗಳೂರಿನಲ್ಲಿ ಅತಿ ದೊಡ್ಡ ಸೌರ ವಿದ್ಯುತ್ ಅಳವಡಿಸಿದ ಸಂತ ಅಲೋಶಿಯಸ್ ಕಾಲೇಜು

ಮಂಗಳೂರಿನಲ್ಲಿ ಅತಿ ದೊಡ್ಡ ಸೌರ ವಿದ್ಯುತ್ ಅಳವಡಿಸಿದ ಸಂತ ಅಲೋಶಿಯಸ್ ಕಾಲೇಜು

ಮಂಗಳೂರು ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನಲ್ಲಿ ಶುಕ್ರವಾರ 605 ಕಿಲೋ ವಾಟ್ ಸಾಮರ್ಥ್ಯದ ಸೌರ ವಿದ್ಯುತ್ ವ್ಯವಸ್ಥೆಗೆ ಚಾಲನೆ ನೀಡಲಾಯಿತು.

ವಿದ್ಯಾ ಸಂಸ್ಥೆಗಳಲ್ಲಿಯೇ ಇದು ಅತಿ ದೊಡ್ಡ ಸೌರ ವ್ಯವಸ್ಥೆಯಾಗಿದೆ. ಇಶಾ ಸೋಲಾರ್ ಎನರ್ಜಿಯವರು ಇದರ ಅಳವಡಿಕೆಯ ಜವಾಬ್ದಾರಿ ವಹಿಸಿದ್ದರು.

ಅಧ್ಯಕ್ಷತೆಯನ್ನು ರೆ. ಫಾ. ಮೆಲ್ವಿನ್ ಜೆ. ಪಿಂಟೋ ವಹಿಸಿದ್ದರು. ಸುದೇಶ್ ಮಾರ್ಟಿಸ್ ಮುಖ್ಯ ಅತಿಥಿಯಾಗಿದ್ದರು. ಕೈಂಕರ್ಯದ ರಾಬಿನ್ ಮಾರ್ಟಿಸ್‌ರಿಗೆ ಅಭಿನಂದನೆ ಸಲ್ಲಿಸಲಾಯಿತು. ರೆ. ಫಾ. ಫೆಲಿಕ್ಸ್ ವಿಕ್ಟರ್, ರೆ. ಫಾ. ಪ್ರವೀಣ್ ಮಾರ್ಟಿಸ್, ಪಿಆರ್‌ಓ ಶಿಲ್ಪಾ ಡಿಸೋಜಾ, ಡಾ. ಟಾಮ್, ವಿವೇಕ್, ಸೌರ ಎಂಜಿನಿಯರ್ ರಾಜನ್ ಮೆನನ್, ಲಿಯೋ ಡಿಸೋಜಾ, ಆಲ್ವಿನ್ ಡೇಸಾ ಮೊದಲಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Join Whatsapp
Exit mobile version