Home Uncategorized ನಾಸೀರ್ ವಿದ್ಯಾನಗರ ಅವರಿಗೆ ‘ಅತ್ತ್ಯುತ್ತಮ ಸಮಾಜ ಸೇವಕ’ ಪ್ರಶಸ್ತಿ ನೀಡಿ ಗೌರವಿಸಿದ VCC

ನಾಸೀರ್ ವಿದ್ಯಾನಗರ ಅವರಿಗೆ ‘ಅತ್ತ್ಯುತ್ತಮ ಸಮಾಜ ಸೇವಕ’ ಪ್ರಶಸ್ತಿ ನೀಡಿ ಗೌರವಿಸಿದ VCC

ವಿದ್ಯಾನಗರ: ಹಲವಾರು ಸಮಾಜ ಸೇವಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ನರಿಂಗಾನ, ಕೈರಂಗಳ ಸೇರಿದಂತೆ ಪ್ರದೇಶಗಳಲ್ಲಿ ಜನಪ್ರಿಯತೆಯನ್ನು ಗಳಿಸಿದ್ದ ನಾಸೀರ್ ವಿದ್ಯಾನಗರ ಅವರಿಗೆ VCCಯು ‘ಅತ್ತ್ಯುತ್ತಮ ಸಮಾಜ ಸೇವಕ’ ಪ್ರಶಸ್ತಿ ನೀಡಿ ಗೌರವಿಸಿದೆ.

ಸಾಧಕನನ್ನು ಸನ್ಮಾನಿಸಿದ ನಂತರ ಮಾತನಾಡಿದ ಹಿರಿಯರಾದ ಶೇಕಬ್ಬ ವಿದ್ಯಾನಗರ, ಇಂದಿನ ಸಮಾಜದಲ್ಲಿ ಯುವಕರು ಬೇರೆ ಬೇರೆ ದಾರಿ ಕಡೆ, ದುಶ್ಚಟಗಳಿಗೆ ಬಲಿಯಾಗುತ್ತಿದ್ದು, ಸಮಾಜ ಸೇವೆಗಳು, ಸಹಾಯ ಹಸ್ತ ಚಾಚುವಂತಹ ಯುವ ಮನಸ್ಸುಗಳು ಸಿಗುವುದೇ ವಿರಳವಾಗಿದೆ. ಇಂತಹಾ ಕಾಲದಲ್ಲಿ ನಾಸೀರ್ ವಿದ್ಯಾನಗರ ಅವರ ಸೇವೆಗಳು ಶ್ಲಾಘನೀಯ ಎಂದರು.

ಈ ಸಂದರ್ಭದಲ್ಲಿ ಕರೀಮ್ ಇಂಜಿನಿಯರ್, ಅಶ್ರಫ್ DS, ರಹಿಮಾನ್ ಜಿ.ಎ, ಅಶ್ರಫ್ BI ಉಪಸ್ಥಿತರಿದ್ದರು.

Join Whatsapp
Exit mobile version