ಸೋಶಿಯಲ್ ಫೋರಮ್ ಒಮಾನ್ ನಿಂದ ಭಾರತೀಯ ವೈದ್ಯರ ದಿನಾಚರಣೆ

Prasthutha|

ಮಸ್ಕತ್: ಒಮಾನ್ ನ ವಿವಿಧ ಆಸ್ಪತ್ರೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ವೈದ್ಯರನ್ನು ಭೇಟಿ ಮಾಡಿ ಹೂಗುಚ್ಛ ಮತ್ತು ಶುಭಾಶಯ ಪತ್ರಗಳನ್ನು ಹಂಚುವ ಮೂಲಕ ಸೋಶಿಯಲ್ ಫೋರಮ್ ಒಮಾನ್ ವತಿಯಿಂದ ಜುಲೈ 1ರ ಭಾರತೀಯ ವೈದ್ಯರ ದಿನವನ್ನು ವಿಶಿಷ್ಟವಾಗಿ ಆಚರಿಸಲಾಯಿತು. ಕೊರೋನ ಸಂದಿಗ್ಧ ಸಂದರ್ಭದಲ್ಲಿ ಸಮರೋಪಾದಿಯಾಗಿ ಸೇವೆ ಸಲ್ಲಿಸುತ್ತಿರುವ ವೈದ್ಯ ಸಮೂಹವನ್ನು ಇದೇ ಸಂದರ್ಭದಲ್ಲಿ ಅಭಿನಂದಿಸಿ ಹುರಿದುಂಬಿಸಲಾಯಿತು.

- Advertisement -

ಒಮಾನ್ ನ ವಿವಿಧ ಸರಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಭಾರತೀಯ ವೈದ್ಯರನ್ನು ಗುರುತಿಸಿ ವೈದ್ಯರ ದಿನದ ಶುಭಾಶಯಗಳನ್ನು ಸಲ್ಲಿಸಲಾಯಿತು. ಬದರ್ ಅಲ್ ಸಮಾ, ಅಲ್ ಸಲಾಮ, ಗ್ರೀನ್ ಕಾರ್ನರ್ ಕ್ಲಿನಿಕ್, ಸ್ಟಾರ್ ಕೇರ್, ಸೊಹಾರ್ ಕ್ಲಿನಿಕ್, ಫೆರ್ರಿ ಕ್ಲಿನಿಕ್ ಮುಂತಾದ ಆಸ್ಪತ್ರೆಗಳಿಗೆ ತೆರಳಿ ಮತ್ತು ಫೋನು ಕರೆಗಳ ಮೂಲಕ 80ಕ್ಕೂ ಹೆಚ್ಚು ವೈದ್ಯರಿಗೆ ವೈದ್ಯರ ದಿನದ ಶುಭಾಶಯಗಳನ್ನು ಸಲ್ಲಿಸಲಾಯಿತು.

Join Whatsapp