Home ಟಾಪ್ ಸುದ್ದಿಗಳು ದ.ಕ. ಜಿಲ್ಲೆಯಲ್ಲಿ ಈವರೆಗೆ 8095 ಮಂದಿ ಮಾತ್ರ ಗೃಹಲಕ್ಷ್ಮಿ ನೋಂದಣಿ: ಕಾಡಿದ ಸರ್ವರ್ ಸಮಸ್ಯೆ

ದ.ಕ. ಜಿಲ್ಲೆಯಲ್ಲಿ ಈವರೆಗೆ 8095 ಮಂದಿ ಮಾತ್ರ ಗೃಹಲಕ್ಷ್ಮಿ ನೋಂದಣಿ: ಕಾಡಿದ ಸರ್ವರ್ ಸಮಸ್ಯೆ

ಮಂಗಳೂರು: ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷಿ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆಗೆ ಶುಕ್ರವಾರ ದ.ಕ.ಜಿಲ್ಲೆಯಲ್ಲಿ ಸ್ಪಂದನ ವ್ಯಕ್ತವಾಗಿದೆ. ‘ಗ್ರಾಮ ಒನ್ ಕೇಂದ್ರ’ಗಳಲ್ಲಿ ಕಳೆದೆರಡು ದಿನಗಳಲ್ಲಿ 8095 ಅರ್ಜಿಗಳು ಸಲ್ಲಿಕೆಯಾಗಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.


ಅರ್ಜಿ ಸಲ್ಲಿಕೆ ಪ್ರಕ್ರಿಯೆಯ ಮೊದಲ ದಿನವಾದ ಗುರುವಾರ ಸರ್ವರ್ ಸಮಸ್ಯೆಯಿಂದ ದ.ಕ.ಜಿಲ್ಲೆಯಲ್ಲಿ ಕೇವಲ 1,217 ಅರ್ಜಿಗಳು ಮಾತ್ರ ಸಲ್ಲಿಕೆಯಾಗಿತ್ತು.


ಎರಡನೇ ದಿನವಾದ ಶುಕ್ರವಾರ ಸರ್ವರ್ ಡೌನ್ ಆಗಿದ್ದರೂ ಕೂಡ ಅರ್ಜಿಗಳ ಸಂಖ್ಯೆಯಲ್ಲಿ ಹೆಚ್ಚಳ ಕಂಡು ಬಂದಿವೆ. ಜಿಲ್ಲೆಯ 223 ಗ್ರಾಪಂ, 60 ಸ್ಥಳೀಯ ಸಂಸ್ಥೆಗಳು, 179 ಗ್ರಾಮ ಒನ್ ಕೇಂದ್ರಗಳಲ್ಲಿ ಅರ್ಜಿ ಸಲ್ಲಿಕೆ ಪ್ರಕ್ರಿಯೆ ನಡೆಯುತ್ತಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Join Whatsapp
Exit mobile version