Home ಟಾಪ್ ಸುದ್ದಿಗಳು ಸಮವಸ್ತ್ರ ಕಡ್ಡಾಯಗೊಳಿಸಿರುವುದು ಕಾನೂನು ಬಾಹಿರವೆಂದ PU ನಿರ್ದೇಶಕಿ ವರ್ಗಾವಣೆ!

ಸಮವಸ್ತ್ರ ಕಡ್ಡಾಯಗೊಳಿಸಿರುವುದು ಕಾನೂನು ಬಾಹಿರವೆಂದ PU ನಿರ್ದೇಶಕಿ ವರ್ಗಾವಣೆ!

ಚಾಮರಾಜನಗರ: ಪದವಿ ಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕಿ ಸ್ನೇಹಲ್ ಅವರನ್ನು ರಾಜ್ಯ ಸರಕಾರ ಯಾವುದೇ ಹುದ್ದೆಯನ್ನು ನೀಡದೆ ವರ್ಗವಾಣೆ ಮಾಡಿದೆ.

ಉಡುಪಿ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಇತ್ತೀಚೆಗೆ ಉಂಟಾಗಿದ್ದ ಹಿಜಾಬ್ ವಿಚಾರದ ಬಳಿಕ ಸ್ನೇಹಲ್ ಅವರು ಹೊರಡಿಸಿದ್ದ ಸುತ್ತೋಲೆಯೇ ಅವರ ವರ್ಗಾವಣೆಗೆ ಕಾರಣವೆನ್ನಲಾಗಿದೆ.

ಹಿಜಾಬ್ ವಿಚಾರದ ಬಳಿಕ ಸ್ನೇಹಲ್ ಅವರು ಸುತ್ತೋಲೆ ಹೊರಡಿಸಿ ಪಿಯು ಹಂತದಲ್ಲಿ ಸಮವಸ್ತ್ರ ಕಡ್ಡಾಯಗೊಳಿಸಿಲ್ಲ. ಕಾಲೇಜು ಆಡಳಿತ ಮಂಡಳಿಯವರು ಸಮವಸ್ತ್ರ ಕಡ್ಡಾಯಗೊಳಿಸಿರುವುದು ಕಾನೂನುಬಾಹಿರ ಎಂದು ಹೇಳಿದ್ದರು. ರಾಜ್ಯ ಸರ್ಕಾರ ಹಿಜಾಬ್  ವಿರೋಧಿಸುವವರ ಪರ ಇದ್ದುದರಿಂದ ಈ ಸುತ್ತೋಲೆಯಿಂದ ರಾಜ್ಯ ಸರ್ಕಾರ ಮುಜುಗರಕ್ಕೆ ಈಡಾಯಿತು.

ಪಿಯು ಹಂತದಲ್ಲಿ ಸಮವಸ್ತ್ರ ಕಡ್ಡಾಯವೇ ಇಲ್ಲ,ಇನ್ನು ಹಿಜಾಬ್ ಗೆ ವಿರೋಧವೇಕೆ ಎಂದು ಸಾರ್ವಜನಿಕರು ಪ್ರಶ್ನಿಸತೊಡಗಿದರು. ಈ ಮಧ್ಯೆ ಸಂಘಪರಿವಾರ ನಾಯಕರು ಮತ್ತು ಬಿಜೆಪಿ ಶಾಸಕರು ಹಿಜಾಬ್ ವಿರುದ್ಧವಾಗಿ ಹೇಳಿಕೆ ನೀಡಿ ಹಿಜಾಬ್ ಧರಿಸಿ ಬರುವ ಮಕ್ಕಳನ್ನು ತರಗತಿಗೆ ಪ್ರವೇಶಿಸದಂತೆ ತಡೆಯಲು ಸರ್ಕಾರಿ ಪ್ರಾಂಶುಪಾಲರಿಗೆ ಸೂಚಿಸಿದ್ದರು.

ಸ್ನೇಹಲ್ ಹೊರಡಿಸಿದ್ದ ಸುತ್ತೋಲೆಯಿಂದಾಗಿ ಸಂಘಪರಿವಾರದ ನಾಯಕರಿಗೆ ಮತ್ತು ಬಿಜೆಪಿ ಶಾಸಕರಿಗೆ ಹಿನ್ನಡೆಯಾಗಿತ್ತು. ಈ ಹಿನ್ನೆಲೆಯಲ್ಲಿ ಪದವಿ ಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕಿ ಸ್ನೇಹಲ್ ಅವರನ್ನು ವರ್ಗಾವಣೆಗೊಳಿಸಿ ರಾಜ್ಯ ಸರ್ಕಾರ ನಿನ್ನೆ ಆದೇಶ ಹೊರಡಿಸಿದೆ.

ಅವರ ಸ್ಥಾನಕ್ಕೆ ಬೀದರ್ ಜಿಲ್ಲಾಧಿಕಾರಿ ರಾಮಚಂದ್ರ ಅವರನ್ನು ನೇಮಿಸಲಾಗಿದೆ.

Join Whatsapp
Exit mobile version