Home ಟಾಪ್ ಸುದ್ದಿಗಳು ವಿಮಾನದಲ್ಲಿ ಕಾಣಿಸಿಕೊಂಡ ಹಾವು: ವೀಡಿಯೊ ವೈರಲ್

ವಿಮಾನದಲ್ಲಿ ಕಾಣಿಸಿಕೊಂಡ ಹಾವು: ವೀಡಿಯೊ ವೈರಲ್

ಬ್ಯಾಂಕಾಕ್: ಬ್ಕಾಂಕ್‌ನಿಂದ ಫುಕೆಟ್‌ಗೆ ಪ್ರಯಾಣಿಸುತ್ತಿದ್ದ ವಿಮಾನದಲ್ಲಿ ಇದ್ದಕ್ಕಿದ್ದಂತೆ ಹಾವು ಕಾಣಿಸಿಕೊಂಡಿದೆ. ಪ್ರಯಾಣಿಕರು ತಮ್ಮ ಸಣ್ಣಪುಟ್ಟ ಲಗೇಜ್​ ಇಡುವ ಮೇಲಿನ ಕ್ಯಾಬಿನ್​​​ನಲ್ಲಿ ಹಾವು ಕಾಣಿಸಿಕೊಂಡಿದ್ದು, ಹಾವನನ್ನು ಸೆರೆಹಿಡಿದು ಪ್ರಯಾಣಿಕರನ್ನು ರಕ್ಷಿಸಲಾಗಿದೆ.

ವಿಮಾನ ಟೇಕ್ ಆಫ್ ಆಗುತ್ತಿರುವಾಗಲೇ ಸಿಬ್ಬಂದಿ ಅದನ್ನು ಪ್ಲಾಸ್ಟಿಕ್ ಬಾಟಲಿಯಲ್ಲಿ ಸೆರೆ ಹಿಡಿದಿದ್ದಾರೆ. ವಿಮಾನ ಲ್ಯಾಂಡ್ ಆದ ಕೂಡಲೇ ಹೆಚ್ಚಿನ ಪರಾಮರ್ಷೆ ಮಾಡಿದಾಗ ಆ ಹಾವು ವಿಷಕಾರಿಯಲ್ಲ ಎಂದು ಸ್ಪಷ್ಟವಾಗಿದ್ದು, ಪ್ರಿಯಾಣಿಕರಿಗೆ ಮಾಹಿತಿ ನೀಡಿದ್ದಾರೆ.

ವಿಮಾನ ಹೊರಡುವ ಮೊದಲು ಫುಕೆಟ್ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ಕ್ಯಾರಿ-ಆನ್ ಲಗೇಜ್ ಅನ್ನು ಸಂಪೂರ್ಣವಾಗಿ ಪರಿಶೀಲಿಸಲಾಗಿತ್ತು. ಆದರೂ ಹಾವು ಹೇಗೆ ಒಳಗೆ ನುಸುಳಿ ಬಂದಿತ್ತು ಎಂಬುದು ನಿಗೂಢವಾಗಿದೆ.

ಈ ವಿಡಿಯೋವನ್ನು ತನ್ನ ಫೋನ್‌ನಲ್ಲಿ ಆ ಪ್ರಯಾಣಿಕ ತೆಗೆದಿರಿಸಿಕೊಂಡಿದ್ದಾರೆ. ಅದನ್ನು ತಮ್ಮ ವೈಯಕ್ತಿಕ ರೀಲ್ಸ್ ಖಾತೆಯೊಂದಿಗೆ ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

Join Whatsapp
Exit mobile version