ಉಪ್ಪಿನಂಗಡಿಯ ‘ಸ್ನೇಕ್ ಮುಸ್ತಫಾ’ ಹಾವಿನ ಕಡಿತಕ್ಕೊಳಗಾಗಿ ಮೃತ್ಯು!

Prasthutha|

Snake is my life ಎಂದು ಸ್ಟೇಟಸ್ ಹಾಕಿದ್ದ ಮುಸ್ತಫಾ !

- Advertisement -

ಮಂಗಳೂರು : ಸಾರ್ವಜನಿಕ ಸ್ಥಳಗಳಲ್ಲಿ, ಮನೆಗಳಿಗೆ ಬರುವ ವಿಷಕಾರಿ ಹಾವುಗಳನ್ನು ಹಿಡಿದು ಕಾಡಿಗೆ ಬಿಟ್ಟು ರಕ್ಷಿಸುತ್ತಿದ್ದ ಉಪ್ಪಿನಂಗಡಿಯ 34ನೇ ನೆಕ್ಕಿಲಾಡಿ ನಿವಾಸಿ ‘ಸ್ನೇಕ್ ಮುಸ್ತಾ’ ಎಂದೇ ಚಿರಪರಿಚಿತರಾಗಿದ್ದ ಎಂ.ಆರ್. ಮುಹಮ್ಮದ್ ಮುಸ್ತಾಫ ಶನಿವಾರ ನಾಗರಹಾವಿನ ಕಡಿತಕ್ಕೆ ಸಿಲುಕಿ ಮೃತಪಟ್ಟಿದ್ದಾರೆ.

34ನೇ ನೆಕ್ಕಿಲಾಡಿ ಬೊಳಂತಿಲ ಹೊಸ ಕಾಲನಿ ನಿವಾಸಿ ಎಂ.ಆರ್. ಮುಸ್ತಾಫ ವೃತ್ತಿಯಲ್ಲಿ ಅಟೋ ರಿಕ್ಷಾ ಚಾಲಕರಾಗಿದ್ದು ಇವರು ವಿಷಕಾರಿ ಹಾವುಗಳನ್ನು ಹಿಡಿದು ರಕ್ಷಿಸಿ ಕಾಡಿಗೆ ಬಿಡುತ್ತಿದ್ದರು. ಶನಿವಾರ ಸಂಜೆ ಬೆಳ್ತಂಗಡಿ ತಾಲೂಕಿನ ನೇಜಿಕಾರಿನಲ್ಲಿ ಮನೆಯೊಂದಕ್ಕೆ ನಾಗರಹಾವು ಬಂದಿದ್ದು,ಮನೆಮಂದಿ ಇವರಿಗೆ ಕರೆ ಮಾಡಿದ್ದು,ಅದನ್ನು ಹಿಡಿದು ರಕ್ಷಿಸಲು ಅಲ್ಲಿಗೆ ತೆರಳಿದ್ದರು. ಹಾವು ಹಿಡಿಯುತ್ತಿದ್ದ ಸಂದರ್ಭ ಇವರಿಗೆ ಹಾವು ಕಚ್ಚಿದ್ದು, ತೀವ್ರ ಅಸ್ವಸ್ಥಗೊಂಡ ಇವರನ್ನು ಪುತ್ತೂರು ಆಸ್ಪತ್ರೆಗೆ ಸಾಗಿಸಲಾಯಿತು ಬಳಿಕ ಹೆಚ್ಚಿನ ಚಿಕಿತ್ಸೆಗೆಂದು ಅಲ್ಲಿಂದ ಮಂಗಳೂರಿಗೆ ತೆಗೆದುಕೊಂಡು ಹೋಗುತ್ತಿದ್ದಾಗ ದಾರಿ ಮಧ್ಯೆ ಇವರು ಮೃತರಾದರು ಎನ್ನಲಾಗಿದೆ.

- Advertisement -

Snake is my life’ ಎಂದವರು ಹಾವಿನ ಕಡಿತಕ್ಕೊಳಗಾದರು !

“Snake is My Life” ಸ್ಟೇಟಸ್ ಹಾಕಿಕೊಂಡಿದ್ದ ಮುಸ್ತಫಾ ಹಾವು ಹಿಡಿಯುವುದರಲ್ಲಿ ಎತ್ತಿದ ಕೈ. ಸಾಕಷ್ಟು ಸಂಘಸಂಸ್ಥೆಗಳಿಂದ ಸನ್ಮಾನಿಸಿಕೊಂಡಿದ್ದ. ಇವತ್ತು ಸಂಜೆ 4.30ರ ವೇಳೆಗೆ ಉಪ್ಪಿನಂಗಡಿ ಸಮೀಪ ಪೆದಮಲೆ ಎಂಬಲ್ಲಿನ ಮನೆಯೊಂದರಿಂದ ಎಂದಿನಂತೆ ಹಾವು ಹಿಡಿಯಲೆಂದು ಬಂದ ಕರೆಗೆ ಹೋಗಿ ಮತ್ತೆ ಬಾರದ ಲೋಕಕ್ಕೆ ಪ್ರಯಾಣಿಸಿದ್ದಾನೆ. “ಹಾವೇ ನನ್ನ ಜೀವನ” ಎಂದಿದ್ದವನ ಬಾಳು ಇಂದು ಹಾವಿನಿಂದಲೇ ಅಂತ್ಯಕಂಡದ್ದು ದುರಂತ.

Join Whatsapp