ಸುವರ್ಣ ನ್ಯೂಸ್ ಸಂಪಾದಕನ ವಿರುದ್ಧ ಜಾಮೀನು ರಹಿರ ವಾರಂಟ್
ಮೈಸೂರು: ಸೋಶಿಯಲ್ ಡೆಮಾಕ್ರಟಿಕ್ ಪಾರ್ಟ್ ಆಫ್ ಇಂಡಿಯಾ (SDPI) ಪಕ್ಷದ ವಿರುದ್ಧ ಅಪಪ್ರಚಾರ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿ ಸುವರ್ಣ ನ್ಯೂಸ್ ಸಂಪಾದಕ ಅಜಿತ್ ಹನುಮಕ್ಕನವರ್ ವಿರುದ್ಧ ಮೈಸೂರಿನ ಜೆ.ಎಂ.ಎಫ್.ಸಿ. ಕೋರ್ಟ್ ಜಾಮೀನು ರಹಿತ ವಾರಂಟ್ ಹೊರಡಿಸಿದೆ.
ಎಸ್.ಡಿ.ಪಿ.ಐ. ಪಕ್ಷದ ಬಗ್ಗೆ ಆಪಪ್ರಚಾರ ನಡೆಸಿರುವುದಾಗಿ ಸುವರ್ಣ ನ್ಯೂಸ್ ಸಂಪಾದಕ ಅಜಿತ್ ಹನುಮಕ್ಕನವರ್ ಹಾಗೂ ಪ್ರಧಾನ ಸಂಪಾದಕ ರವಿ ಹೆಗ್ಡೆ ಎಂಬವರ ವಿರುದ್ಧ ಮೈಸೂರಿನಲ್ಲಿ ಕೇಸ್ ದಾಖಲಾಗಿತ್ತು. ಈ ಪ್ರಕರಣದ ಸಂಬಂಧ ಅಜಿತ್ ಅವರು ನ್ಯಾಯಾಲಯಕ್ಕೆ ಹಾಜರಾಗದ ಹಿನ್ನೆಲೆಯಲ್ಲಿ ಕೋರ್ಟ್ ಜಾಮೀನು ರಹಿತ ವಾರಂಟ್ ಜಾರಿಗೊಳಿಸಿದೆ.
ಡಿಸೆಂಬರ್ 08ರಂದು ವಿಚಾರಣೆಗೆ ಹಾಜರಾಗುವಂತೆ ಅಕ್ಟೋಬರ್ 31ರಂದು ನ್ಯಾಯಾಲಯ ಜಾಮೀನು ರಹಿತ ವಾರಂಟ್ ಜಾರಿಗೊಳಿಸಿದೆ.