Home ಟಾಪ್ ಸುದ್ದಿಗಳು ಎಸ್ ಕೆಎಂ, ಬಿಕೆಯುಗೂ ಲೋಕಸಭೆಗೆ ನುಗ್ಗಿದ ಆರೋಪಿಗಳಿಗೂ ಸಂಬಂಧ ಇಲ್ಲ: ರಾಕೇಶ್ ಟಿಕಾಯತ್

ಎಸ್ ಕೆಎಂ, ಬಿಕೆಯುಗೂ ಲೋಕಸಭೆಗೆ ನುಗ್ಗಿದ ಆರೋಪಿಗಳಿಗೂ ಸಂಬಂಧ ಇಲ್ಲ: ರಾಕೇಶ್ ಟಿಕಾಯತ್

ನವದೆಹಲಿ: ಲೋಕಸಭಾ ಕಲಾಪದ ವೇಳೆ ಭದ್ರತಾ ಲೋಪವಾಗಿದ್ದ ಘಟನೆಗೆ ದೇಶಾದ್ಯಂತ ಖಂಡನೆ ವ್ತಕ್ತವಾಗುತ್ತಿದ್ದು, ರೈತ ನಾಯಕ ರಾಕೇಶ್ ಟಿಕಾಯತ್ ಕೂಡ ಖಂಡಿಸಿದ್ದಾರೆ. ಮಾತ್ರವಲ್ಲದೆ, ಮಾಧ್ಯಮದ ಒಂದು ವಿಭಾಗ ವರದಿ ಮಾಡಿದಂತೆ ಆರೋಪಿಗಳೊಂದಿಗೆ ಸಂಯುಕ್ತ ಕಿಸಾನ್ ಮೋರ್ಚಾ(ಎಸ್ ಕೆಎಂ) ಅಥವಾ ಭಾರತೀಯ ಕಿಸಾನ್ ಯೂನಿಯನ್(ಬಿಕೆಯು) ಯಾವುದೇ ಸಂಬಂಧ ಹೊಂದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ರೈತರ ಪ್ರತಿಭಟನೆ, ಮಣಿಪುರ ಬಿಕ್ಕಟ್ಟು, ನಿರುದ್ಯೋಗದಂತಹ ಸಮಸ್ಯೆಗಳಿಂದ ಆಕ್ರೋಶಗೊಂಡು ಈ ಕೃತ್ಯ ಎಸಗಿರುವುದಾಗಿ ಬಂಧಿತ ಆರೋಪಿ ಅಮೋಲ್ ಶಿಂಧೆ ಪೊಲೀಸರ ವಿಚಾರಣೆ ವೇಳೆ ಹೇಳಿರುವುದಾಗಿ ಮಾದ್ಯಮಗಳಲ್ಲಿ ವರದಿಯಾಗಿತ್ತು. ಮತ್ತೋರ್ವ ಆರೋಪಿ ನೀಲಂ ಈ ಹಿಂದೆ ರೈತರ ಪ್ರತಿಭಟನೆ ಸೇರಿದಂತೆ ಹಲವು ಆಂದೋಲನಗಳಲ್ಲಿ ಭಾಗವಹಿಸಿದ್ದರು ಎಂದು ವರದಿಯಾಗಿತ್ತು. ಹೀಗಾಗಿ ಈ ಬಗ್ಗೆ ಹಿಂದಿಯಲ್ಲಿ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಟಿಕಾಯತ್, ಇಂದು ಸಂಸತ್ತಿನಲ್ಲಿ ನಡೆದ ಆತಂಕ ಸೃಷ್ಟಿಸುವ ಘಟನೆ ಅತ್ಯಂತ ಖಂಡನೀಯ. ಸಂಯುಕ್ತ ಕಿಸಾನ್ ಮೋರ್ಚಾ ಹೆಸರಿನಲ್ಲಿ ಮಾಧ್ಯಮಗಳಲ್ಲಿ ಪ್ರಕಟವಾಗಿರುವ ಸುದ್ದಿ ಸಂಪೂರ್ಣ ಆಧಾರ ರಹಿತ. SKM ಅಥವಾ BKU ಗೂ ಇದಕ್ಕೂ ಯಾವುದೇ ಸಂಬಂಧವಿಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ.

ಸಂಸತ್ತಿನ ಹೊರಗೆ ನಡೆದ ಪ್ರತಿಭಟನೆ ಮತ್ತು ಸಂಸತ್ತಿನ ಒಳಗೆ ಅಶ್ರುವಾಯು ಸಿಡಿಸಿದ ಘಟನೆ ಬೇರೆ ಬೇರೆಯಾಗಿದ್ದು, ಮಾಧ್ಯಮಗಳು ಗೊಂದಳಗೊಂಡಿವೆ ಎಂದೂ ಹೇಳಲಾಗುತ್ತಿದ್ದು, ಇದೇ ಸಮಯದಲ್ಲಿ ಟೀಕಾಯತ್ ಸ್ಪಷ್ಟೀಕರಣ ನೀಡಿದ್ದಾರೆ.

Join Whatsapp
Exit mobile version