Home ಟಾಪ್ ಸುದ್ದಿಗಳು ಲೈಂಗಿಕ ಕಿರುಕುಳ ಕೇಸ್ | ‘ಚರ್ಮದಿಂದ ಚರ್ಮಕ್ಕೆ ಸ್ಪರ್ಷ’ ಬಾಂಬೆ ಹೈಕೋರ್ಟ್ ವ್ಯಾಖ್ಯಾನ ವಿಕೃತವಾದುದು :...

ಲೈಂಗಿಕ ಕಿರುಕುಳ ಕೇಸ್ | ‘ಚರ್ಮದಿಂದ ಚರ್ಮಕ್ಕೆ ಸ್ಪರ್ಷ’ ಬಾಂಬೆ ಹೈಕೋರ್ಟ್ ವ್ಯಾಖ್ಯಾನ ವಿಕೃತವಾದುದು : NCW

ನವದೆಹಲಿ : ಪೋಕ್ಸೊ ಕಾಯ್ದೆಯಡಿ ದಾಖಲಾದ ಅಪ್ರಾಪ್ತ ವಯಸ್ಕ ಹುಡುಗಿಯ ಮೇಲಿನ ಲೈಂಗಿಕ ದೌರ್ಜನ್ಯ ಕುರಿತ ಬಾಂಬೆ ಹೈಕೋರ್ಟ್ ತೀರ್ಪೊಂದನ್ನು ಪ್ರಶ್ನಿಸಿ ರಾಷ್ಟ್ರೀಯ ಮಹಿಳಾ ಆಯೋಗ (NCW)ದ ಮೇಲ್ಮನವಿಯನ್ನು ಸುಪ್ರೀಂ ಕೋರ್ಟ್ ವಿಚಾರಣೆಗೆ ಒಪ್ಪಿದೆ.

ಅಪ್ರಾಪ್ತ ವಯಸ್ಕ ಹುಡುಗಿಯ ದೇಹ ಮತ್ತು ಆರೋಪಿಯ ದೇಹ ‘ಚರ್ಮದಿಂದ ಚರ್ಮಕ್ಕೆ (skin to skin)’ ಪರಸ್ಪರ ತಾಗಿರದಿದ್ದರೆ, ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆ (ಪೋಕ್ಸೊ ಕಾಯ್ದೆ)ಯಡಿ ಲೈಂಗಿಕ ಅಪರಾಧ ಎಂದು ಪರಿಗಣಿಸಲಾಗುವುದಿಲ್ಲ  ಎಂಬ ಬಾಂಬೆ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ರಾಷ್ಟ್ರೀಯ ಮಹಿಳಾ ಆಯೋಗ (NCW) ಸುಪ್ರೀಂ ಕೋರ್ಟಿಗೆ ಅರ್ಜಿಯನ್ನು ಸಲ್ಲಿಸಿದೆ.

ದೈಹಿಕ ಸಂಪರ್ಕ ಎಂಬುವುದಕ್ಕೆ ಬಾಂಬೆ ಹೈಕೊರ್ಟ್ ‘ಚರ್ಮದಿಂದ ಚರ್ಮದ ಸ್ಪರ್ಶ’ ಎಂದು ವಿಕೃತವಾಗಿ ವ್ಯಾಖ್ಯಾನಿಸಿದೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.

ಹೈಕೋರ್ಟ್ ಆದೇಶದಲ್ಲಿ ಪ್ರಸ್ತಾಪಿಸಲಾಗಿರುವ ಇಂತಹ ಸಂಕುಚಿತ ವ್ಯಾಖ್ಯಾನ  ಅಪಾಯಕಾರಿ ಮತ್ತು ಮಹಿಳೆಯರು ಹಾಗೂ ಮಕ್ಕಳ ಸುರಕ್ಷತೆಯ ಮೇಲೆ ಪರಿಣಾಮ ಬೀರುತ್ತದೆ ಎಂದು ಎನ್ ಸಿ ಡಬ್ಲ್ಯೂ ಅರ್ಜಿಯಲ್ಲಿ ತಿಳಿಸಿದೆ

Join Whatsapp
Exit mobile version