Home ಟಾಪ್ ಸುದ್ದಿಗಳು ಯುವ ನಿಧಿ ಫಲಾನುಭವಿಗಳಿಗೆ ಕೌಶಲ್ಯ ತರಬೇತಿ: ಶರಣ ಪ್ರಕಾಶ್ ಪಾಟೀಲ್

ಯುವ ನಿಧಿ ಫಲಾನುಭವಿಗಳಿಗೆ ಕೌಶಲ್ಯ ತರಬೇತಿ: ಶರಣ ಪ್ರಕಾಶ್ ಪಾಟೀಲ್

ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರದ ಮಹತ್ವದ ಗ್ಯಾರೆಂಟಿ ಯೋಜನೆಗಳಲ್ಲಿ ಒಂದಾದ “ಯುವ ನಿಧಿ” ಗೆ ನೋಂದಣಿ ಪ್ರಕ್ರಿಯೆ ಆರಂಭವಾಗಿದೆ. ಈ ಯುವ ನಿಧಿ ಯೋಜನೆಗೆ ನೋಂದಾಯಿಸಿಕೊಂಡವರಿಗೆ ಕೌಶಲ್ಯ ತರಬೇತಿ ನೀಡಲು ಸರ್ಕಾರ ಚಿಂತಿಸಿದೆ.


ಯುವ ನಿಧಿ ಯೋಜನೆಯ ಫಲಾನುಭವಿಗಳು ಸರ್ಕಾರದ ಸ್ಕಿಲ್ ಕನೆಕ್ಟ್ ಪೋರ್ಟಲ್ ನಲ್ಲಿ ನೋಂದಣಿಯಾಗಿರುತ್ತಾರೆ. ನಂತರ ಅವರನ್ನು ಕೌಶಲ್ಯವಂತರನ್ನಾಗಿಸಿ, ಉದ್ಯೋಗ ಕೊಡಿಸಲಾಗುತ್ತದೆ. ಜೊತೆಗೆ ಸ್ಕಿಲ್ ಕೌನ್ಸಿಲ್ ರಚಿಸಲಾಗಿದ್ದು, ಕೈಗಾರಿಕೆ ಹಾಗೂ ಶಿಕ್ಷಣ ಕ್ಷೇತ್ರದವರು ಅದರಲ್ಲಿ ಇದ್ದಾರೆ. ಬೇರೆ ಯಾವೆಲ್ಲ ಕ್ಷೇತ್ರದಲ್ಲಿ ಕೌಶಲ್ಯ ನೀಡಬಹುದು ಎಂಬ ಬಗ್ಗೆ ಅವರು ಸಲಹೆ ನೀಡುತ್ತಾರೆ ಎಂದು ವೈದ್ಯಕೀಯ ಶಿಕ್ಷಣ ಮತ್ತು ಕೌಶಲ್ಯಾಭಿವೃದ್ಧಿ ಸಚಿವ ಶರಣ ಪ್ರಕಾಶ್ ಪಾಟೀಲ್ ಹೇಳಿದ್ದಾರೆ.

Join Whatsapp
Exit mobile version