Home ಕರಾವಳಿ ಸಮುದ್ರದ ತೆರೆಗೆ ಸಿಲುಕಿದ್ದ ಆರು ಮಂದಿಯ ರಕ್ಷಣೆ

ಸಮುದ್ರದ ತೆರೆಗೆ ಸಿಲುಕಿದ್ದ ಆರು ಮಂದಿಯ ರಕ್ಷಣೆ

ಕಾರವಾರ: ಕಾರವಾರದ ಕಡಲ ತೀರದಲ್ಲಿ ನೀರಿಗೆ ಇಳಿದು, ತೆರೆಗೆ ಸಿಕ್ಕಿಕೊಂಡಿದ್ದ ನಾಲ್ಕು ಮಕ್ಕಳ ಸಹಿತ ಆರು ಮಂದಿಯನ್ನು ಸ್ಥಳೀಯ ಪ್ರವಾಸಿ ಮಿತ್ರರು ಪಾರು ಮಾಡಿದ್ದಾರೆ.

ಹುಬ್ಬಳ್ಳಿಯ ಶಫಿ ಎನ್ನುವವರ ಕುಟುಂಬದ 13 ಜನ ಕಾರವಾರ ಪ್ರವಾಸ ಬಂದಿದ್ದರು. 13 ಮಂದಿ ಪೈಕಿ ಒಂದೇ ಕುಟುಂಬದ 4 ಮಕ್ಕಳು ಸೇರಿದಂತೆ ಒಟ್ಟು 6 ಜನರನ್ನು ರಕ್ಷಿಸಲಾಗಿದೆ. ವಾಟರ್ ಸ್ಪೋರ್ಟ್ಸ್ ಮುಗಿಸಿಕೊಂಡು ಕಡಲ ತೀರದಲ್ಲಿ ಆಟವಾಡುತ್ತಿದ್ದರು. ಈ ವೇಳೆ ವಾಟರ್ ಸ್ಪೋರ್ಟ್ಸ್ ಸಿಬ್ಬಂದಿ ಪಾಲಕರಿಗೆ ಮಕ್ಕಳನ್ನು ನೀರಿನಲ್ಲಿ ಮುಂದೆ ಹೋಗದಂತೆ ಎಚ್ಚರಿಕೆ ವಹಿಸುವಂತೆ ಸೂಚಿಸಿದ್ದರು. ಆದರೂ ಮಕ್ಕಳು ಆಟವಾಡುತ್ತ ಮುಂದೆ ಸಾಗಿದ್ದು, ಒಮ್ಮೆಲೇ ಬಂದ ಅಲೆಯಿಂದ ಎಲ್ಲರೂ ಕೊಚ್ಚಿ ಹೋಗಿದ್ದಾರೆ.

ಕೂಡಲೆ ಟೂರಿಸ್ಟ್ ಫ್ರೆಂಡ್ ಖ್ಯಾತಿಯ ರಾಘವೇಂದ್ರ ನಾಯ್ಕ್, ಲೈಫ್ ಗಾರ್ಡ್ ಕೇತನ್ ಸಾವಂತ್ ಮತ್ತು ವೇವ್ ಅಡ್ವೆಂಚರ್ಸ್ ತಂಡದವರು ಮುಳುಗಲಿದ್ದ ನಾಲ್ಕು ಮಕ್ಕಳ ಸಹಿತ ಆರು ಜನರನ್ನು ಬಚಾವು ಮಾಡಿದರು. ಒಬ್ಬ ಸಣ್ಣ ಹುಡುಗ ಮತಿ ತಪ್ಪಿದ್ದರಿಂದ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗುತ್ತಿದೆ.

Join Whatsapp
Exit mobile version