ಒಮಾನ್ ಬೆಂಬಿಡದ ಮಳೆ: ಆರು ಸಾವು

Prasthutha|

ಒಮಾನ್‌‌ ದೇಶದ ಕೆಲವು ಪ್ರಾಂತ್ಯಗಳಲ್ಲಿ ಎರಡು ದಿನಗಳ ಭಾರೀ ಮಳೆಯಿಂದಾಗಿ ಆರು ಜನರು ಸಾವನ್ನಪ್ಪಿದ್ದಾರೆ ಎಂದು ರಾಯಲ್ ಓಮನ್ ಪೊಲೀಸರು ಶನಿವಾರ ತಿಳಿಸಿದ್ದಾರೆ. ನಿರಂತರ ಸುರಿದ ಮಳೆಯಿಂದ ಪ್ರವಾಹವುಂಟಾಗಿ ದೇಶದ ಹಲವಾರು ಭಾಗಗಳು ತೀವ್ರ ಹಾನಿಗೊಳಗಾಗಿವೆ,

- Advertisement -

ಮಳೆಯ ಪ್ರವಾಹಕ್ಕೆ ಆರು ಜನರ ಸಾವಿನ ಪ್ರಕರಣಗಳು ದೃಢವಾಗಿದೆ ಮತ್ತು ಸಾವಿನ ಸಂಖ್ಯೆ ಏರುವ ಸಾಧ್ಯತೆ ಇದೆ ಎಂದು ರಾಯಲ್ ಒಮಾನ್ ಪೋಲೀಸ್ ಇದರ ಸಾರ್ವಜನಿಕ ಸಂಪರ್ಕ ವಿಭಾಗದ ಕ್ಯಾಪ್ಟನ್ ‘ಮುನೀರ್ ಬಿನ್ ಮುಹಮ್ಮದ್ ಅಲ್ ಸಿನಾನ್” “ಒಮಾನ್ ಟಿವಿ”ಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದರು.

“ಮುಸಂದಮ್, ಉತ್ತರ ಅಲ್-ಬತೀನಾ, ದಕ್ಷಿಣ ಅಲ್-ಬತೀನಾ, ಮಸ್ಕತ್, ಅಲ್-ಬುರೈಮಿ, ಅಲ್-ದಹಿರಾ, ಅಲ್ – ದಾಖ್ಲಿಯಾ, ದಕ್ಷಿಣ ಅಲ್-ಶರ್ಕಿಯಾ ಮತ್ತು ಉತ್ತರ ಅಲ್-ಶರ್ಕಿಯಾ ಗವರ್ನರೇಟ್‌ಗಳಲ್ಲಿ ಜನವರಿ 5 ತಾರೀಖಿನವರೆಗೆ ಕೆಲವೊಮ್ಮೆ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ. ಗಾಳಿ, ಹಠಾತ್ ಪ್ರವಾಹಗಳು, ಆಲಿಕಲ್ಲು ಬೀಳುವ ಸಾಧ್ಯತೆ ಇದೆ ಎಂದು ಹವಾಮಾನ ವರದಿ ತಿಳಿಸಿದೆ.

Join Whatsapp