ಬೆಂಗಳೂರು: ಆರು ಮಂದಿ ಐಪಿಎಸ್ ಅಧಿಕಾರಿಗಳನ್ನು ಗುರುವಾರ ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಐಪಿಎಸ್ ಅಧಿಕಾರಿಗಳಾದ ಡಿಐಜಿ ಡಾ.ವೈ.ಎಸ್. ರವಿಕುಮಾರ್ (ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯ), ಡಾ.ದಿವ್ಯಾ ವೈ. ಗೋಪಿನಾಥ್(ಎಸ್ಪಿ ,ಮೈಸೂರು ಪೊಲೀಸ್ ಅಕಾಡೆಮಿ), ಆರ್. ಚೇತನ್(ಕಲಬುರಗಿ ಪೊಲೀಸ್ ಕಮಿಷನರ್), ಹನುಮಂತರಾಯ(ಎಸ್ಪಿ ಗುಪ್ತದಳ), ಎಂ. ನಾರಾಯಣ್(ಎಸ್ಪಿ , ಕೋಲಾರ) ಮತ್ತು ಡಾ.ಶಿವಕುಮಾರ್(ಎಸ್ಪಿ , ಹಾವೇರಿ ಜಿಲ್ಲೆ) ಅವರನ್ನು ವರ್ಗಾವಣೆ ಮಾಡಲಾಗಿದೆ.