ಮುಂಬೈ: ಸರ್ಕಾರಿ ಬಾಲಕಿಯರ ವಸತಿ ನಿಲಯದ ಶೌಚಾಲಯದ ಕಿಟಕಿಯ ಗ್ರಿಲ್ ಮುರಿದು ಆರು ಅಪ್ರಾಪ್ತ ಬಾಲಕಿಯರು ಪರಾರಿಯಾಗಿರುವ ಘಟನೆ ಮುಂಬೈನ ಗೋವಂದಿಯಲ್ಲಿ ನಡೆದಿದೆ.
ಭಾನುವಾರ ಮುಂಜಾನೆ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ತಪ್ಪಿಸಿಕೊಳ್ಳುವ ಮೊದಲು ಹಾಸ್ಟೆಲ್ ನ ವಾರ್ಡನ್ ರೂಂ ಅನ್ನು ಲಾಕ್ ಮಾಡಿ ಎಸ್ಕೇಪ್ ಆಗಿದ್ದಾರೆ ಎನ್ನಲಾಗಿದೆ.
ಬಾಲಕಿಯರಿಗೆ ಪರಾರಿಯಾಗಲು ಯಾರೋ ಸಹಾಯ ಮಾಡಿರುವ ಶಂಕೆ ವ್ಯಕ್ತವಾಗಿದ್ದು, ಈ ಕುರಿತು ಅಪರಿಚಿತ ವ್ಯಕ್ತಿಗಳ ಮೇಲೆ ಕೇಸ್ ದಾಖಲಾಗಿದೆ.
ಆರು ಬಾಲಕಿಯರು ಅಪ್ರಾಪ್ತರಾಗಿದ್ದು, ಈ ರೀತಿ ಹಾಸ್ಟೆಲ್ ನಿಂದ ಪರಾರಿಯಾಗಲು ಕಾರಣ ಏನು ಎಂಬುದು ಇನ್ನೂ ನಿಗೂಢವಾಗಿದೆ.ಈ ಕುರಿತು ಸಿಸಿಟಿವಿ ದೃಶ್ಯ ಆಧರಿಸಿ ಸ್ಥಳೀಯ ಪೊಲೀಸರು ಶೋಧ ಕಾರ್ಯ ಆರಂಭಿಸಿದ್ದಾರೆ.