Home ಟಾಪ್ ಸುದ್ದಿಗಳು ಬಿಎಸ್ಪಿ, ಬಿಜೆಪಿ ಒಳಗೊಂಡಂತೆ ಹಲವು ಮುಖಂಡರು ಸಮಾಜವಾದಿ ಪಕ್ಷ ಸೇರ್ಪಡೆ

ಬಿಎಸ್ಪಿ, ಬಿಜೆಪಿ ಒಳಗೊಂಡಂತೆ ಹಲವು ಮುಖಂಡರು ಸಮಾಜವಾದಿ ಪಕ್ಷ ಸೇರ್ಪಡೆ

ಲಕ್ನೋ: ಬಿಎಸ್ಪಿಯಿಂದ ಉಚ್ಛಾಟಿತ ಶಾಸಕ ವಿನಯ್ ಶಂಕರ್ ತಿವಾರಿ, ಬಿಜೆಪಿ ಶಾಸಕ ದಿಗ್ವಿಜಯ ನಾರಾಯಣ ಚೌಬೆ ಮತ್ತು ಇತರ ಹಲವಾರು ಬ್ರಾಹ್ಮಣ ಮುಖಂಡರು ಭಾನುವಾರ ಲಕ್ನೋದಲ್ಲಿ ಅಖಿಲೇಶ್ ಯಾದವ್ ಅವರ ಸಮ್ಮುಖದಲ್ಲಿ ಸಮಾಜದಲ್ಲಿ ಪಕ್ಷ (ಎಸ್.ಪಿ) ಗೆ ಸೇರ್ಪಡೆಗೊಂಡರು.

ಉತ್ತರಪ್ರದೇಶ ಸರ್ಕಾರ ಬ್ರಾಹ್ಮಣ ಸಮುದಾಯವನ್ನು ಅವಮಾನಿಸಲಾಗುತ್ತಿದೆ ಎಂದು ಈ ವೇಳೆ ವಿನಯ್ ಶಂಕರ್ ತಿವಾರಿ ಆರೋಪಿಸಿದ್ದಾರೆ. ಮಾತ್ರವಲ್ಲ ಆದಿತ್ಯನಾಥ್ ಸರ್ಕಾರದಿಂದ ಬ್ರಾಹ್ಮಣ ಸಮುದಾಯಕ್ಕೆ ಅನ್ಯಾಯವಾಗುತ್ತಿದೆ ಮತ್ತು ರಾಜ್ಯದಲ್ಲಿ ಎನ್ಕೌಂಟರ್ ನೀತಿಯನ್ನು ಅನುಸರಿಸಲಾಗುತ್ತಿದೆ ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.

ಈ ಕುರಿತು ಪ್ರತಿಕ್ರಿಯಿಸಿದ ಸಮಾಜವಾದಿ ಮುಖಂಡ ಅಖಿಲೇಶ್ ಯಾದವ್, ಈ ಮೇಲಿನ ಮುಖಂಡರ ಪಕ್ಷ ಸೇರ್ಪಡೆಯೊಂದಿಗೆ ಬಿಜೆಪಿ ಸೋಲುವುದು ಖಚಿತವಾಗಿದೆ. ಕಾರಣ ಬಿಜೆಪಿ ಪ್ರತಿಯೊಂದು ಸಮುದಾಯವನ್ನು ಗುರಿಯಾಗಿಸಿದೆ ಎಂದು ಅವರು ತಿಳಿಸಿದರು.

ಮುಂದಿನ ವರ್ಷದ ಆರಂಭದಲ್ಲಿ ಉತ್ತರಪ್ರದೇಶ ಅಸೆಂಬ್ಲಿಗೆ ಚುನಾವಣೆ ನಡೆಯಲಿದೆ.

Join Whatsapp
Exit mobile version