ಸಿರಾಜ್ ಮ್ಯಾಜಿಕ್: 8ನೇ ಬಾರಿ ಏಶ್ಯಕಪ್ ಮುಡಿಗೇರಿಸಿಕೊಂಡ ಭಾರತ

Prasthutha|


ಏಷ್ಯಾಕಪ್ 2023ರ ಫೈನಲ್ ಪಂದ್ಯದಲ್ಲಿ ಆತಿಥೇಯ ಶ್ರೀಲಂಕಾವನ್ನು ಬಗ್ಗುಬಡಿದಿರುವ ಟೀಮ್ ಇಂಡಿಯಾ ಎಂಟನೇ ಬಾರಿಗೆ ಏಷ್ಯಾ ಕಪ್ ಚಾಂಪಿಯನ್ ಆಗಿ ಹೊರಹೊಮ್ಮಿತು.

- Advertisement -

ಗೆಲ್ಲಲು ಕೇವಲ 51 ರನ್‌ಗಳ ಗುರಿ ಪಡೆದಿದ್ದ ರೋಹಿತ್ ಪಡೆ, ಯಾವುದೇ ವಿಕೆಟ್ ನಷ್ಟವಿಲ್ಲದೆ 6.1 ಓವರ್‌ಗಳಲ್ಲಿ ಗುರಿ ತಲುಪಿತು. ಆ ಮೂಲಕ 10 ವಿಕೆಟ್‌ಗಳ ಭರ್ಜರಿ ಜಯ ಗಳಿಸಿತು.

ಮೊಹಮ್ಮದ್ ಸಿರಾಜ್, ಒಂದೇ ಓವರ್‌ನಲ್ಲಿ ನಾಲ್ಕು ವಿಕೆಟ್ ಕಿತ್ತು ಐತಿಹಾಸಿಕ ಸಾಧನೆ ಮಾಡಿದ್ದಲ್ಲದೇ, ಒಟ್ಟು 21 ರನ್‌ ನೀಡಿ 6 ವಿಕೆಟ್ ಗಳಿಸಿದ್ದರು.