ಮಂಗಳೂರು: SIO ದಕ್ಷಿಣ ಕನ್ನಡದ ನಿಯೋಗ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂ ರಾವ್ ಅವರನ್ನು ಕಡಬದಲ್ಲಿ ಭೇಟಿಯಾಗಿ ಮಾತುಕತೆ ನಡೆಸಿತು.
ಕಡಬದಲ್ಲಿ ನಡೆದ ಆಸಿಡ್ ದಾಳಿಯ ಭಯಾನಕತೆ ವಿದ್ಯಾರ್ಥಿಗಳಿಗೆ ಭದ್ರತೆ ಇಲ್ಲ ಎಂಬುದಕ್ಕೆ ಕೈಗನ್ನಡಿ. ಆದ್ದರಿಂದ ರಾಜ್ಯದ ಎಲ್ಲಾ ಶಾಲೆ ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಭದ್ರತೆಯನ್ನು ಪರಿಶೀಲಿಸಬೇಕು.
ಕಡಬದಲ್ಲಿ ನಡೆದ ಘಟನೆ ಮುಂದೆಂದೂ ನಡೆಯದಂತೆ ಕಾನೂನು ಭದ್ರತೆಯನ್ನು ನೀಡಬೇಕು. ಮಕ್ಕಳ ಕಲ್ಯಾಣ ಇಲಾಖೆಗಳ ಮೂಲಕ ವಿದ್ಯಾರ್ಥಿಗಳಿಗೆ ವಿಸ್ತೃತ ಯೋಜನೆ ಸ್ಥಾಪಿಸಬೇಕು ಮುಂತಾದ ಬೇಡಿಕೆಗಳನ್ನು ನಿಯೋಗ ಸಚಿವರ ಮುಂದೆ ಇರಿಸಿತು.
ನಿಯೋಗದಲ್ಲಿ ಶಾಹಿಲ್ ಕೆಸಿ ರಸ್ತೆ, ಮೊಹಮ್ಮದ್ ಹಯ್ಯನ್ ಮತ್ತು ಮುಸ್ತಫಾ ಇದ್ದರು.