Home ಟಾಪ್ ಸುದ್ದಿಗಳು ಕ್ರಾಂತಿಕಾರಿ ಕವಿ, ಗಾಯಕ ಗದ್ದರ್ ಅವರ ಹಾಡುಗಳು ಶೋಷಿತರ ನೋವು ಮತ್ತು ಪ್ರತಿರೋಧದ ಹೋರಾಟಗಳಿಗೆ ಪ್ರೇರಣ...

ಕ್ರಾಂತಿಕಾರಿ ಕವಿ, ಗಾಯಕ ಗದ್ದರ್ ಅವರ ಹಾಡುಗಳು ಶೋಷಿತರ ನೋವು ಮತ್ತು ಪ್ರತಿರೋಧದ ಹೋರಾಟಗಳಿಗೆ ಪ್ರೇರಣ ಶಕ್ತಿಯಾಗಿದ್ದವು: ಅಬ್ದುಲ್ ಮಜೀದ್

ಬೆಂಗಳೂರು: ದಲಿತ ಕುಟುಂಬದಲ್ಲಿ ಜನಿಸಿದ ವಿಠಲ್ ರಾವ್ ಗದ್ದರ್ ಅವರಿಗೆ ಶೋಷಣೆ ಮತ್ತು ಶೋಷಣೆಗೆ ಒಳಗಾದವರ ನೋವುಗಳ ಸ್ವ ಅನುಭವ ಇತ್ತು. ಅವರ ಕ್ರಾಂತಿಕಾರಿ ಹಾಡುಗಳು ಶೋಷಿತರ ನೋವು ಮತ್ತು ಹೋರಾಟಗಳಿಗೆ ಪ್ರೇರಣಶಕ್ತಿಗಳಾಗಿದ್ದವು. ಅವರ ನಿಧನಕ್ಕೆ ತೀವ್ರ ಸಂತಾಪಗಳನ್ನು ಸೂಚಿಸುತ್ತೇನೆ ಎಂದು ಸೋಶಿಯಲ್ ಡೆಮೊಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ಪಕ್ಷದ ರಾಜ್ಯಾಧ್ಯಕ್ಷರಾದ ಅಬ್ದುಲ್ ಮಜೀದ್ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

1980 ರ ದಶಕದಲ್ಲಿ ಅಂದಿನ ಅಖಂಡ ಆಂಧ್ರಪ್ರದೇಶದಲ್ಲಿ ಆರಂಭವಾದ ಕ್ರಾಂತಿಕಾರಿ ನಕ್ಸಲ್ ಚಳುವಳಿಯ ಭಾಗವಾಗಿದ್ದ ಗದ್ದರ್ ಅವರು ಬರೆದು ಹಾಡುತ್ತಿದ್ದ ಹಾಡುಗಳುಹೋರಾಟಗಾರರನ್ನು ಮತ್ತು ಜನರನ್ನ ಬಡಿದೇಳುಸುತ್ತಿದ್ದವು. ಪ್ರತಿ ಹಳ್ಳಿ, ಊರುಗಳಲ್ಲಿ ಅವರ ಹಾಡುಗಳು ಶೋಷಿತರ ನಾಡಗೀತೆ ಎಂಬಂತೆ ಪ್ರಖ್ಯಾತಿ ಪಡೆದಿದ್ದವು. ಜನರ ಸಮಸ್ಯೆಗಳನ್ನು ವಿವರಿಸುವ, ಆ ಸಮಸ್ಯೆಗಳಿವೆ ಪ್ರತಿರೋಧದ ಹೋರಾಟಗಳಿಗೆ ಜನರನ್ನು ಎಳೆದು ತರುವಲ್ಲಿ ಗದ್ದರ್ ಅವರ ಕವನಗಳು ಮತ್ತು ಹಾಡುಗಾರಿಕೆ ಅಂದು ಬಹುದೊಡ್ಡ ಪಾತ್ರ ವಹಿಸಿದ್ದವು.

ನಂತರದ ದಿನಗಳಲ್ಲಿ ಅವರು ಹಿಂಸಾ ಮಾರ್ಗದ ಗುಂಪನ್ನು ತೊರೆದು ತೆಲಂಗಾಣ ಪ್ರತ್ಯೇಕ ರಾಜ್ಯ ಬೇಡಿಕೆ ಹೋರಾಟದಲ್ಲಿ ಮುಖ್ಯ ಪಾತ್ರ ವಹಿಸಿದರು. ಜನರ ಸಮಸ್ಯೆಗಳಿಗೆ ಬಂದೂಕಿನಿಂದ ಪರಿಹಾರ ಸಾಧ್ಯವಿಲ್ಲ ಎಂದು ಮನಗಂಡು ಸಂವಿಧಾನ ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆಯ ಮೂಲಕವೇ ಜನರ ಸಂಕಷ್ಟಗಳಿಗೆ ಪರಿಹಾರ ಕಂಡುಕೊಳ್ಳುವ ನಿರ್ಧಾರಕ್ಕೆ ಬಂದದ್ದು, ರಾಜಕೀಯ ಪಕ್ಷ ಸ್ಥಾಪಿಸಿದ್ದು ಇತಿಹಾಸ. ಅಮೂಲಕ ಅವರು ಜನತೆಯಲ್ಲಿ ಬಾಬಾ ಸಾಹೇಬರ ಸಂವಿಧಾನವೇ ಈ ದೇಶದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಎಂಬ ನಂಬಿಕೆಯನ್ನು ನೆಲೆಯೂರಿಸುವ ಪ್ರಯತ್ನ ಮಾಡಿದರು. ಅವರ ನಿಧನಕ್ಕೆ ಮತ್ತೊಮ್ಮೆ ಸಂತಾಪಗಳು.

Join Whatsapp
Exit mobile version