Home ಟಾಪ್ ಸುದ್ದಿಗಳು ಫ್ಯಾಶಿಸ್ಟರ ವಿರುದ್ಧದ ಮೌನವು ದೇಶದ ಪ್ರತಿಯೊಬ್ಬರಿಗೂ ಅಪಾಯಕಾರಿ: ರಿಯಾಝ್ ಫರಂಗಿಪೇಟೆ

ಫ್ಯಾಶಿಸ್ಟರ ವಿರುದ್ಧದ ಮೌನವು ದೇಶದ ಪ್ರತಿಯೊಬ್ಬರಿಗೂ ಅಪಾಯಕಾರಿ: ರಿಯಾಝ್ ಫರಂಗಿಪೇಟೆ

►ರಾಹುಲ್ ಗಾಂಧಿಯ ಒಂದು ಹೇಳಿಕೆಗೆ 2 ವರ್ಷ ಜೈಲು ಶಿಕ್ಷೆ ವಿಧಿಸುವುದಾದರೆ ಸಂಘಪರಿವಾರದವರ ಉಗ್ರ ಭಾಷಣಕ್ಕೆ ಎಷ್ಟು ಕಾಲ ಜೈಲು ಶಿಕ್ಷೆ ಪ್ರಕಟಿಸಬೇಕಾಗಿ ಬರಬಹುದು?

ಮಂಗಳೂರು: ಕಾಂಗ್ರೆಸ್ ಪಕ್ಷದ ಮಹೋನ್ನತ ನಾಯಕ ರಾಹುಲ್ ಗಾಂಧಿಯವರ ಒಂದು ಭಾಷಣದ ತುಣುಕಿಗಾಗಿ ಎರಡು ವರ್ಷಗಳ ಜೈಲು ಶಿಕ್ಷೆಯ ತೀರ್ಪು ವಿಧಿಸುವುದಾದರೆ RSS ಮತ್ತು ಸಂಘ ಪರಿವಾರದ ನಾಯಕರ ಉಗ್ರ ಭಾಷಣಗಳಿಗೆ ಎಷ್ಟು ವರ್ಷಗಳ ಕಾಲ ಜೈಲು ಶಿಕ್ಷೆ ಪ್ರಕಟಿಸಬೇಕಾಗಿ ಬರಬಹುದು ? ಫ್ಯಾಶಿಸ್ಟರ ವಿರುದ್ಧದ ಮೌನವು ದೇಶದ ಪ್ರತಿಯೊಬ್ಬರಿಗೂ ಅಪಾಯಕಾರಿ ಎಂದು ಎಸ್’ಡಿಪಿಐ ರಾಷ್ಟ್ರೀಯ ಕಾರ್ಯದರ್ಶಿ ಹಾಗೂ ಉಳ್ಳಾಲ ವಿಧಾನಸಭಾ ಕ್ಷೇತ್ರದ ಎಸ್’ಡಿಪಿಐ ಅಭ್ಯರ್ಥಿ ರಿಯಾಝ್ ಫರಂಗಿಪೇಟೆ ಎಚ್ಚರಿಸಿದ್ದಾರೆ.


ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೀಡಿದ್ದ ಒಂದು ಹೇಳಿಕೆಗಾಗಿ ಎರಡು ವರ್ಷಗಳ ಬಳಿಕ ಎರಡು ವರ್ಷ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಲಾಗಿದೆ. ಆದರೆ ಆರೆಸ್ಸೆಸ್ ಮತ್ತು ಸಂಘಪರಿವಾರ ನಾಯಕರು ದಿನನಿತ್ಯ ಉಗ್ರ ಭಾಷಣ ಮಾಡುತ್ತಿದ್ದಾರೆ. ಹಾಗಾದರೆ ಇಂತಹವರಿಗೆ ಎಷ್ಟು ವರ್ಷಗಳ ಕಾಲ ಜೈಲು ಶಿಕ್ಷೆ ಪ್ರಕಟಿಸಬೇಕಾಗಿ ಬರಬಹುದು? ಎಂದು ಅವರು ಪ್ರಶ್ನಿಸಿದ್ದಾರೆ.

Join Whatsapp
Exit mobile version