Home ಟಾಪ್ ಸುದ್ದಿಗಳು ಸಿಕ್ಕಿಂ: ಭಾರಿ ಬಹುಮತದೊಂದಿಗೆ ಎರಡನೇ ಬಾರಿಗೆ ಅಧಿಕಾರಕ್ಕೇರಿದ ಸಿಕ್ಕಿಂ ಕ್ರಾಂತಿಕಾರಿ ಮೋರ್ಚಾ

ಸಿಕ್ಕಿಂ: ಭಾರಿ ಬಹುಮತದೊಂದಿಗೆ ಎರಡನೇ ಬಾರಿಗೆ ಅಧಿಕಾರಕ್ಕೇರಿದ ಸಿಕ್ಕಿಂ ಕ್ರಾಂತಿಕಾರಿ ಮೋರ್ಚಾ

ಗ್ಯಾಂಗ್ಟಕ್: ಸಿಕ್ಕಿಂ ಕ್ರಾಂತಿಕಾರಿ ಮೋರ್ಚಾ (ಎಸ್‌ಕೆಎಂ) ಪಕ್ಷ ಸಿಕ್ಕಿಂ ವಿಧಾನಸಭೆ ಚುನಾವಣೆಯಲ್ಲಿ ಬಹುಮತ ಸಾಧಿಸಿ ಎರಡನೇ ಬಾರಿಗೆ ಅಧಿಕಾರಕ್ಕೇರಿದೆ.

2019ರಲ್ಲಿ 17 ಸ್ಥಾನಗಳನ್ನು ಗೆದ್ದಿದ್ದ ಎಸ್‌ಕೆಎಂ ಈ ಬಾರಿ 26 ಕ್ಷೇತ್ರಗಳಲ್ಲಿ ಜಯ ಸಾಧಿಸಿದೆ. ಇನ್ನಷ್ಟೇ ಫಲಿತಾಂಶ ಪ್ರಕಟವಾಗಬೇಕಿರುವ 5 ಕಡೆ ಮುನ್ನಡೆಯನ್ನೂ ಕಾಯ್ದುಕೊಂಡಿದೆ. ಭಾರಿ ಮುಖಭಂಗ ಅನುಭವಿಸಿರುವ ಎಸ್‌ಡಿಎಫ್‌ ಕೇವಲ 1 ಸ್ಥಾನ ಗೆದ್ದಿದೆ. ಅದು ಕಳೆದ ಚುನಾವಣೆಯಲ್ಲಿ 15 ಸ್ಥಾನಗಳನ್ನು ಗೆದ್ದುಕೊಂಡಿತ್ತು.

32 ವಿಧಾನ ಸಭಾ ಕ್ಷೇತ್ರಗಳಿರುವ ರಾಜ್ಯದ ಮುಖ್ಯಮಂತ್ರಿ ಪ್ರೇಮ್‌ ಸಿಂಗ್ ತಮಾಂಗ್ ನೇತೃತ್ವದ ಸರ್ಕಾರ ಎರಡನೇ ಅವಧಿಗೆ ಮುಂದುವರಿಯಲಿದೆ.

ಇಂದು ಮತ ಎಣಿಕೆ ನಡೆದ ಎರಡು ರಾಜ್ಯಗಳಲ್ಲೂ ಆಡಳಿತ ಪಕ್ಷ ಮರಳಿ ಅಧಿಕಾರಕ್ಕೆ ಏರಿದೆ. ಅರುಣಾಚಲಂನಲ್ಲಿ ಆಡಳಿತರೂಢ ಬಿಜೆಪಿ ಬಹುಮತ ಪಡೆದಿದೆ.

Join Whatsapp
Exit mobile version