Home ಟಾಪ್ ಸುದ್ದಿಗಳು ‘ಮುಸ್ಲಿಮರ ಮೇಲಿನ ದೌರ್ಜನ್ಯಗಳ ವರದಿ ಮಾಡಿದ್ದೇ ಅಪರಾಧ’ : ಸಿದ್ದೀಕ್ ಕಾಪ್ಪನ್ ವಿರುದ್ಧದ ಚಾರ್ಜ್ ಶೀಟಿನಲ್ಲಿನ...

‘ಮುಸ್ಲಿಮರ ಮೇಲಿನ ದೌರ್ಜನ್ಯಗಳ ವರದಿ ಮಾಡಿದ್ದೇ ಅಪರಾಧ’ : ಸಿದ್ದೀಕ್ ಕಾಪ್ಪನ್ ವಿರುದ್ಧದ ಚಾರ್ಜ್ ಶೀಟಿನಲ್ಲಿನ ಅಚ್ಚರಿಯ ಅಂಶಗಳೇನು ಗೊತ್ತೆ?

ಹೊಸದಿಲ್ಲಿ: ಕಳೆದ ಒಂದು ವರ್ಷದಿಂದ ಜೈಲು ಶಿಕ್ಷೆ ಅನುಭವಿಸುತ್ತಿರುವ ಪತ್ರಕರ್ತ ಸಿದ್ದೀಕ್ ಕಾಪ್ಪನ್ ಅವರ ಚಾರ್ಜ್ ಶೀಟ್ ನಲ್ಲಿ ‘ಅವರು ಮುಸ್ಲಿಮರನ್ನು ಸಂತ್ರಸ್ತರಂತೆ ಚಿತ್ರಿಸಿ ಪ್ರಚೋದಿಸುತ್ತಿದ್ದರು’ ಎಂಬುದನ್ನು ಅವರ ವಿರುದ್ಧ ಸಾಕ್ಷ್ಯ ಎಂದು ಪರಿಗಣಿಸಲಾಗಿದೆ ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿದೆ.

ಇಂಡಿಯನ್ ಎಕ್ಸ್‌ಪ್ರೆಸ್ ವರದಿಯ ಪ್ರಕಾರ, ಕಳೆದ ವರ್ಷ ಅಕ್ಟೋಬರ್‌ 5 ರಂದು ಉತ್ತರ ಪ್ರದೇಶದ ಹತ್ರಾಸ್‌‌ ದಲಿತ ಬಾಲಕಿಯ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನು ವರದಿ ಮಾಡಲು ತೆರಳಿದ್ದ ಕೇರಳ ಮೂಲದ ಪತ್ರಕರ್ತ ಸಿದ್ದೀಕ್ ಕಪ್ಪನ್‌ ರವರನ್ನು ದೇಶದ್ರೋಹದ ಮೇಲೆ ಬಂಧಿಸಿ ಯುಎಪಿಎ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಅವರ ವಿರುದ್ಧ ಸಲ್ಲಿಸಿರುವ ಚಾರ್ಜ್‌ಶೀಟ್‌ನಲ್ಲಿ ‘ಅವರು ಮುಸ್ಲಿಮರನ್ನು ಸಂತ್ರಸ್ತ್ರರಂತೆ ಚಿತ್ರಿಸಿ ಪ್ರಚೋದಿಸುತ್ತಿದ್ದರು ಮತ್ತು ಮಾವೋವಾದಿಗಳು ಮತ್ತು ಕಮ್ಯುನಿಷ್ಟರ ಬಗ್ಗೆ ಸಿಂಪಥಿ ತೋರುವ ಲೇಖನಗಳನ್ನು ಮಾತ್ರ ಬರೆಯುತ್ತಿದ್ದರು’ ಎಂಬುದನ್ನು ಅವರ ವಿರುದ್ಧ ಸಾಕ್ಷ್ಯ ಎಂದು ಪರಿಗಣಿಸಲಾಗಿದೆ.

ಅವರು ಮಾಧ್ಯಮಗಳಿಗೆ ಬರೆದ 36 ಲೇಖನಗಳನ್ನು ಸಾಕ್ಷ್ಯಗಳಾಗಿ ಬಳಸಲಾಗಿದೆ. ಅವುಗಳಲ್ಲಿ ಕೋವಿಡ್ ಸಂದರ್ಭದಲ್ಲಿ ನಡೆದ ನಿಝಾಮುದ್ದೀನ್ ಮರ್ಕಝ್ ಸಭೆ, ಸಿಎಎ ವಿರೋಧಿ ಹೋರಾಟಗಳು, ದೆಹಲಿ ಗಲಭೆ, ರಾಮಜನ್ಮಭೂಮಿ ವಿವಾದ ಮತ್ತು ಶಾರ್ಜಿಲ್ ಇಮಾಮ್ ವಿರುದ್ಧ ಚಾರ್ಜ್‌ಶೀಟ್‌ ಕುರಿತ ಲೇಖನಗಳನ್ನು 5000 ಪುಟಗಳ ಚಾರ್ಜ್‌ ಶೀಟ್ ನಲ್ಲಿ ಉಲ್ಲೇಖಿಸಲಾಗಿದೆ.

ಹತ್ರಾಸ್ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಸಿದ್ದೀಕ್ ಕಾಪ್ಪನ್ ಗಲಭೆಗೆ ಸಂಚು ರೂಪಿಸಿದ್ದಾರೆ ಎಂದು ಚಾರ್ಜ್ ಶೀಟ್ ನಲ್ಲಿರುವ ಆರೋಪವನ್ನು ತೀವ್ರವಾಗಿ ವಿರೋಧಿಸಿದ ಕಪ್ಪನ್ ಪರ ವಕೀಲರು, ಘಟನೆ ನಡೆದ ಉತ್ತರ ಪ್ರದೇಶ ಹತ್ರಾಸ್ ಸ್ಥಳದಲ್ಲಿ ಸಿದ್ದೀಕ್ ಕಪ್ಪನ್ ಇರಲೇ ಇಲ್ಲ. ಘಟನೆ ನಡೆದ ಎರಡು ದಿನಗಳ ನಂತರ ಹತ್ರಾಸ್‌ಗೆ ಹೋಗುವ ದಾರಿಯಲ್ಲಿ ಅವರನ್ನು ಬಂಧಿಸಲಾಯಿತು. ಹೀಗಿದ್ದಾಗ ಅವರು ಅಲ್ಲಿ ಗಲಭೇ ಪ್ರಚೋದಿಸಲು ಸಾಧ್ಯವೇ ಇಲ್ಲ. ಅವರು ಸ್ಥಳಕ್ಕೆ ಹೋಗದಿದ್ದರೆ ಅವರ ವಿರುದ್ಧ ಸಾಕ್ಷಿಗಳು ಹೇಗೆ ಇರಲು ಸಾಧ್ಯ ಎಂದು ಪ್ರಶ್ನಿಸಿದ್ದಾರೆ.

Join Whatsapp
Exit mobile version